ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಟಾಪ್ ಲೆಸ್ ಆದ ಸೆರೆನಾ ವಿಲಿಯಮ್ಸ್..! ವೀಡಿಯೋ ವೈರಲ್
ಮಹಿಳೆಯರಿಗೆ ಇತ್ತಿಚಿನ ದಿನಗಳಲ್ಲಿ ನಾನಾ ರೀತಿಯ ಕಾಯಿಲೆಗಳು ಬರುತ್ತಿರುವೆ. ಅದಕ್ಕೆ ಕಾರಣ ಅವರ ಜೀವನ ಶೈಲಿ ಇರಬಹುದು ಅಥವಾ ಬೇರೆ ಕಾರಣಗಳಿರಬಹುದು. ಆದರೆ ಕೆಲವೊಮ್ಮೆ ಮಹಿಳೆಯರು ತಮ್ಮ ಕಾಯಿಲೆಗಳ ಬಗ್ಗೆ ಹೇಳಿಕೊಳ್ಳಲು ಕೆಲವೊಮ್ಮೆ ಸಂಕೋಚ ಪಡುತ್ತಾರೆ. ಅಂತಹ ಕಾಯಿಲೆಗಳಲ್ಲಿ ಸ್ತನ ಕ್ಯಾನ್ಸರ್ ಕೂಡ ಒಂದು.
ಆದರೆ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಅಮೇರಿಕಾದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ವಿಶೇಷ ವೀಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಸೆರೆನಾ ಬಿಡುಗಡೆ ಮಾಡಿರುವ ವೀಡಿಯೋ ಇದೀಗ ಸಕತ್ ವೈರಲ್ ಆಗಿದೆ. ಸ್ತನ ಕ್ಯಾನ್ಸರ್ ಜಾಗೃತಿ ವೀಡಿಯೋಗಾಗಿ ಸೆರೆನಾ ವಿಲಿಯಮ್ಸ್ ಸ್ವತಃ ಟಾಪ್ ಲೆಸ್ ಆಗಿದ್ದಾರೆ. ಇಷ್ಟೇ ಅಲ್ಲ ವಿಲಿಯಮ್ಸ್ ಹಾಡಿನ ಮೂಲಕ ಕ್ಯಾನ್ಸರ್ ಕುರಿತು ಎಲ್ಲರಲ್ಲೂ ಜಾಗೃತಿಯನ್ನು ಮೂಡಿಸಿದ್ದಾರೆ. ಸ್ತನ ಕ್ಯಾನ್ಸರ್ ಕುರಿತ "ಐ ಟಚ್ ಮೈಸೆಲ್ಫ್" ಹಾಡನ್ನು ಹಾಡೋ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಸೆರೆನಾ ಮುಂದಾಗಿದ್ದಾರೆ. ಈ ಕಾರ್ಯಕ್ಕೆ ಎಲ್ಲವೂ ಪ್ರಶಂಸೆಯ ಸುರಿಮಳೆಯನ್ನು ಸುರಿಸಿದ್ದಾರೆ.
Comments