ಮಾಜಿ ನಾಯಕ ಮ್ಯಾಥ್ಯೂಸ್’ಗೆ ಗೇಟ್’ಪಾಸ್ ನೀಡಿದ ಶ್ರೀಲಂಕಾ...!

27 Sep 2018 10:31 AM | Sports
315 Report

ಶ್ರೀಲಂಕಾ ಏಷ್ಯಾಕಪ್‌ನ ಗುಂಪು ಹಂತದಿಂದಲೇ ಹೊರಬಿದ್ದ ಕಾರಣವಾಗಿ ನಾಯಕತ್ವ ಕಳೆದುಕೊಂಡಿದ್ದ ಏಂಜೆಲೋ ಮ್ಯಾಥ್ಯೂಸ್‌ ಇದೀಗ ತಂಡದಿಂದಲೇ ಹೊರಬಿದ್ದಿದ್ದಾರೆ ಎನ್ನಲಾಗಿದೆ.

ಅ.10ರಿಂದ ಇಂಗ್ಲೆಂಡ್‌ ವಿರುದ್ಧ ತವರಿನಲ್ಲಿ ನಡೆಯಲಿರುವ ಏಕದಿನ ಹಾಗೂ ಟಿ20 ಸರಣಿಗೆ ಬುಧವಾರ ಪ್ರಕಟಗೊಂಡ 15 ಸದಸ್ಯರ ತಂಡದಲ್ಲಿ ಮ್ಯಾಥ್ಯೂಸ್‌ಗೆ ಯಾವುದೇ ಸ್ಥಾನ ನೀಡಲಾಗಿಲ್ಲ. ಆದರೆ ಅವರಿಗೆ ಟೆಸ್ಟ್‌ ತಂಡದಲ್ಲಿ ಸ್ಥಾನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಸೀಮಿತ ಓವರ್‌ಗಳ ತಂಡದಿಂದ ಕೈಬಿಟ್ಟ ಕಾರಣಕ್ಕಾಗಿಯೇ ಆಯ್ಕೆ ಸಮಿತಿ ಫಿಟ್ನೆಸ್‌ ಸಮಸ್ಯೆಯ ಕಾರಣ ನೀಡಿ ಅವರನ್ನು ತಂಡದಿಂದ ಹೊರಹಾಕಿದ್ದಾರೆ ಎನ್ನಲಾಗಿದೆ.

Edited By

Manjula M

Reported By

Manjula M

Comments