ಸಪ್ತಪದಿ ತುಳಿಯಲು ಸಿದ್ದರಾದ ಸೈನಾ ನೆಹ್ವಾಲ್
ಭಾರತ ಬ್ಯಾಡ್ಮಿಂಟನ್ ಕ್ಷೇತ್ರದ ಇಬ್ಬರು ಆಟಗಾರರು ಇದೀಗ ಸಪ್ತಪದಿ ತುಳಿಯಲು ಮುಂದಾಗಿದ್ದಾರೆ. ಯಾರು ಅಂತಾ ಯೋಚನೆ ಮಾಡುತ್ತಿದ್ದೀರಾ.. ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್. ಸೈನಾ ನೆಹ್ವಾಲ್ ಇದೇ ಡಿಸೆಂಬರ್ 16ರಂದು ಕಶ್ಯಪ್ ಅವರ ಕೈ ಹಿಡಿಯಲಿದ್ದಾರೆ.
ಮದುವೆ ಸಮಾರಂಭ ಸರಳವಾಗಿ ನಡೆಯಲಿದೆ. ಸ್ನೇಹಿತರು, ಸಂಬಂಧಿಕರು ಸೇರಿ 100 ಮಂದಿ ಮಾತ್ರ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮದುವೆ ಸಮಾರಂಭದ ಐದು ದಿನಗಳ ನಂತರ ಅಂದ್ರೆ ಡಿಸೆಂಬರ್ 21ರಂದು ಅದ್ಧೂರಿ ಪಾರ್ಟಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಮದುವೆಗೆ ಎರಡೂ ಕುಟುಂಬಗಳಿಂದ ತಯಾರಿ ಜೋರಾಗಿ ನಡೆದಿದೆ. ಬಹುತೇಕ ಡಿಸೆಂಬರ್ 16ರಂದೇ ಮದುವೆ ನಡೆಯಲಿದೆ ಎಂದು ಮಾಹಿತಿಗಳು ತಿಳಿಸಿವೆ.
Comments