ಅಂತೂ ಇಂತೂ ಬಿಡುಗಡೆಯಾಯ್ತು ಕೊಹ್ಲಿ ಚಿತ್ರದ ಟೀಸರ್..!?
ವಿರಾಟ್ ಕೊಹ್ಲಿ ಅಂದ್ರೆ ಸಾಕು ಅಭಿಮಾನಿಗಳಿಗೆ ಅದೇನೋ ಉಲ್ಲಾಸ, ಅದೇನೋ ಸಂತೋಷ… ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಜಗತ್ತೆ ಗುರುತಿಸುವಂತ ಸಾಧನೆಯನ್ನು ಕೊಹ್ಲಿ ಮಾಡಿದ್ದಾರೆ. ಭಾರತ ಕ್ರಿಕೆಟ್ ತಂಡದ ನಾಯಕನಾಗಿ ವಿರಾಟ್ ಕೊಹ್ಲಿ ತಮ್ಮ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹುಟ್ಟಿಸುವುದರ ಜೊತೆಗೆ ಕ್ರಿಕೆಟ್ ಜಗತ್ತಿನಲ್ಲಿ ಸಾಧನೆಯನ್ನು ಕೂಡ ಮಾಡಿದ್ದಾರೆ.
ಸೆ.28ಕ್ಕೆ ಬಿಡುಗಡೆಯಾಗಲಿದೆ ಎನ್ನಲಾಗಿರುವ ಅವರ ಸಿನಿಮಾದ ಟ್ರೈಲರ್‌ಗೂ ಮುನ್ನ, ಮಂಗಳವಾರ 6 ಸೆಕೆಂಡ್‌ಗಳ ಟೀಸರ್ ಒಂದನ್ನು ಕೊಹ್ಲಿ ಟ್ವೀಟರ್‌ನಲ್ಲಿ ಬಹಿರಂಗಗೊಳಿಸಿದರು. ಇದೀಗ ಈ ಟೀಸರ್ ಸಾಮಾಜಿಕ ತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದು ಪೂರ್ಣ ಪ್ರಮಾಣದ ಸಿನಿಮಾವೋ ಇಲ್ಲವೇ ಯಾವುದೋ ಜಾಹಿರಾತಿನ ಪ್ರಚಾರವೋ ಪ್ರಚಾರವೋ ಎನ್ನುವ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ. ಏನೇ ಆಗಲಿ ಸಿನಿಮಾರಂಗಕ್ಕೆ ಕಾಲಿಟ್ಟರೆ ವಿರಾಟ್ ಗೆ ಮತ್ತುಷ್ಟು ಅಭಿಮಾನಿಗಳು ಸಿಗುವುದರಲ್ಲಿ ನೋ ಡೌಟ್..
Comments