ರಾಷ್ಟ್ರಗೀತೆಗೆ ಧ್ವನಿಯಾದ ನಮ್ಮ ಹೆಮ್ಮೆಯ ಕ್ರೀಡಾ ಸಾಧಕರು..ವೀಡೀಯೋ ವೈರಲ್

ನಿನ್ನೆ ಅಷ್ಟೆ ಭಾರತದಲ್ಲಿ 72ನೇ ಸ್ವತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಣೆ ಮಾಡಲಾಗಿದೆ. ಲಾರ್ಡ್ಸ್ ನಲ್ಲಿ ಟೀಮ್ ಇಂಡಿಯಾ ಆಟಗಾರರು ಧ್ವಜಾರೋಹಣ ಮಾಡಿ ಖುಷಿ ಪಟ್ಟರೆ, ಇತ್ತ ಏಷ್ಯನ್ ಗೇಮ್ಸ್ ಗೆ ಸಜ್ಜಾಗುತ್ತಿರುವ ಅಥ್ಲೀಟ್ ಗಳು ರಾಷ್ಟ್ರಗೀತೆ ಹಾಡಿ ಅಭಿಮಾನಿಗಳ ಮನಸೂರೆ ಮಾಡಿದ್ದಾರೆ.
ವಿಶ್ವದಲ್ಲಿ ಭಾರತದ ಧ್ವಜವನ್ನು ಆಗಸದೆತ್ತರಕ್ಕೆ ಹಾರಿಸಿದ ಸಾಧಕರು ರಾಷ್ಟ್ರಗೀತೆಗೂ ಕೂಡ ಧ್ವನಿಯಾಗಿದ್ದಾರೆ. ಅಂತಾರಾಷ್ಟ್ರೀಯ ಚಾಂಪಿಯನ್ ಶಿಪ್ ಗಳಲ್ಲಿ ಪದಕದ ಬೇಟೆ ನಡೆಸಿದ ಆಟಗಾರರನ್ನು ಒಳಗೊಂಡ ವಿಡಿಯೋ ಕ್ರೀಡ ಅಭಿಮಾನಿಗಳನ್ನು ಆಕರ್ಷಣೆ ಮಾಡುತ್ತಿದೆ. ಜಿಮ್ನಾಸ್ಟಿಕ್ ದೀಪಾ ಕರ್ಮಾಕರ್, ಶೂಟರ್ ಹೀನಾ ಸಿಧು ಸೇರಿದಂತೆ ಅನೇಕ ಅಥ್ಲೀಟ್ ಗಳು ಜನಗಣಮನ ಹಾಡಿ ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ್ದಾರೆ.
Comments