ಮರಳಿ ಬಾರದ ಲೋಕಕ್ಕೆ ಪಯಣ ಬೆಳೆಸಿದ ಒನ್'ಡೇ ಟೀಂ ಇಂಡಿಯಾದ ಚೊಚ್ಚಲ ನಾಯಕ ವಾಡೇಕರ್
ಭಾರತ ಆಡಿದ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ನಾಯಕರಾಗಿದ್ದಂತಹ ಅಜಿತ್ ವಾಡೇಕರ್(77) ಬುಧವಾರ ರಾತ್ರಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಮುಂಬೈನಲ್ಲಿರುವ ಜಸ್‌ಲೋಕ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು. 1958ರಲ್ಲಿ ಮುಂಬೈ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು, 1966ರಲ್ಲಿ ಭಾರತ ತಂಡಕ್ಕೆ ಕಾಲಿಟ್ಟರು. 37 ಟೆಸ್ಟ್, 2 ಏಕದಿನ ಪಂದ್ಯಗಳನ್ನು ಅವರು ಆಡಿದರು. 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದ ಅವರು, ಅತ್ಯುತ್ತಮ ಸ್ಲಿಪ್ ಫೀಲ್ಡರ್ ಆಗಿ ಗುರುತಿಸಿಕೊಂಡಿದ್ದರು. ಅಜಿತ್ ನಾಯಕತ್ವದಲ್ಲಿ ಭಾರತ ತಂಡ 1971ರಲ್ಲಿ ವೆಸ್ಟ್ ಇಂಡೀಸ್, 1972-73ರಲ್ಲಿ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಗೆದ್ದಿತ್ತು. 1974ರಲ್ಲಿ ಭಾರತ ತನ್ನ ಚೊಚ್ಚಲ ಏಕದಿನ ಪಂದ್ಯವನ್ನಾಡಿದಾಗ ವಾಡೇಕರ್ ತಂಡದ ನಾಯಕರಾಗಿದ್ದರು.ಅವರ ಸಾವಿಗೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
Comments