ಎಂ ಎಸ್ ಧೋನಿ, ವಿರಾಟ್ ಕೊಹ್ಲಿ ಬಗ್ಗೆ ಹೇಳಿದ್ದೇನು ಗೊತ್ತಾ..!?

ಯುವ ಆಟಗಾರನಾಗಿ ಹಲವು ವರ್ಷಗಳ ಕಾಲ ಮಿಂಚಿದಂತಹ ಕೊಹ್ಲಿ ಸದ್ಯಕ್ಕೆ ಕ್ರಿಕೆಟ್ ಜಗತ್ತಲ್ಲಿ ತನ್ನ ಛಾಪನ್ನು ಮೂಡಿಸಿದ್ದಾರೆ. ಆಟಗಾರನಾಗಷ್ಟೇ ಅಲ್ಲದೇ ಪ್ರಭಾವಿ ನಾಯಕನಾಗಿಯೂ ಕೂಡ ವಿರಾಟ್ ದಾಖಲೆ ಮಾಡಿದ್ದಾರೆ. ವಿರಾಟ್ ಕೊಹ್ಲಿಗೆ ಮಾಜಿ ನಾಯಕನಾದ ಎಂ.ಎಸ್.ಧೋನಿಯಿಂದಲೆ ಪ್ರಶಂಸೆ ಸಿಕ್ಕಿದೆ..
ವಿರಾಟ್ ಕೊಹ್ಲಿ ಕ್ರಿಕೆಟ್ನ ದಂತಕಥೆ ಎಂದು ಕರೆಸಿಕೊಳ್ಳುವಷ್ಟು ಸಮೀಪದಲ್ಲಿದ್ದಾರೆ ಎಂದು ಧೋನಿ ತಿಳಿಸಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿರುವ ವಿರಾಟ್ ಬಗ್ಗೆ ಮಂಗಳವಾರ ಇಲ್ಲಿ ಮಾತನಾಡಿದ ಧೋನಿ, 'ಕೊಹ್ಲಿ ಶ್ರೇಷ್ಠ ಆಟಗಾರ. ಕ್ರಿಕೆಟ್‌ನ ದಂತಕಥೆ ಎಂದು ಕರೆಸಿಕೊಳ್ಳುವ ಸನಿಹಕ್ಕೆ ಅವರು ತಲುಪಿದ್ದಾರೆ. ಅವರ ಯಶಸ್ಸು ಕಂಡು ಖುಷಿಯಾಗುತ್ತದೆ. ಎಲ್ಲೆಡೆ ಅವರು ಬ್ಯಾಟ್ ಮಾಡಿರುವ ರೀತಿ ಅಮೋಘ' ಎಂದರು. ಧೋನಿ ನಾಯಕತ್ವದಲ್ಲಿ ಬೆಳೆದ ವಿರಾಟ್ ಕೊಹ್ಲಿಯ ನಾಯಕತ್ವದ ಬಗ್ಗೆಯೂ ಕೂಡ ಧೋನಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಕೊಹ್ಲಿ ತೋರಿದ ಜವಾಬ್ದಾರಿಯನ್ನು ಮಹೇಂದ್ರ ಸಿಂಗ್ ಧೋನಿ ಹಾಡಿ ಹೊಗಳಿದ್ದಾರೆ.
Comments