ಸಚಿನ್ ಅವರ ಈ ಅಭ್ಯಾಸದ ಗುಟ್ಟು ಬಿಚ್ಚಿಟ್ಟ ಸೌರವ್ ಗಂಗೂಲಿ

ಕ್ರಿಕೆಟ್ ಎಂದರೆ ನೆನಪಾಗೋದೆ ಸಚಿನ್…ಈಗಲೂ ಸಹ ಅಭಿಮಾನಿಗಳು ಸಚಿನ್ ಎಂದರೆ ಸಾಕು ಹುಚ್ಚೆದು ಕುಣಿಯುತ್ತಾರೆ. 'ಕ್ರಿಕೆಟ್ ದೇವರು' ಎಂದು ಕರೆಸಿಕೊಳ್ಳುವ ಸಚಿನ್ ತೆಂಡುಲ್ಕರ್ ಅವರಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸವಿತ್ತಂತೆ. ಅವರ ಮಾಜಿ ಸಹ ಆಟಗಾರ ಹಾಗೂ ಅವರ ಆಪ್ತ ಸ್ನೇಹಿತರಾದ ಸೌರವ್ ಗಂಗೂಲಿ ಸಂದರ್ಶನವೊಂದರಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.
ಸಚಿನ್ ಅವರ ಜೊತೆ ಕಳೆದ ಅಮೂಲ್ಯ ಕ್ಷಣಗಳನ್ನು ನೆನಪು ಮಾಡಿಕೊಂಡ ಸೌರವ್ ಗಂಗೂಲಿ, 'ನಮ್ಮಿಬ್ಬರ ವೃತ್ತಿಬದುಕಿನ ಆರಂಭದ ದಿನಗಳಲ್ಲಿ ನಾವಿಬ್ಬರು ರೂಂಮೇಟ್ಸ್ ಆಗಿದ್ದೆವು ಎಂದರು. ಒಂದು ದಿನ ರಾತ್ರಿ ಸಚಿನ್ ರೂಮಿನಲ್ಲಿ ಓಡಾಡುವುದನ್ನು ನಾನು ನೋಡಿದೆ. ಬಹುಶಃ ಶೌಚಾಲಯಕ್ಕೆ ಹೋಗಲು ಎದ್ದಿರಬೇಕು ಎಂದುಕೊಂಡು ಸುಮ್ಮನೆ ಮಲಗಿದೆ. ಮುಂದಿನ ರಾತ್ರಿಯೂ ಸಹ ಸಚಿನ್ ರೂಂನಲ್ಲಿ ಓಡಾಡಲು ಪ್ರಾರಂಭಿಸಿದರು. ಕುರ್ಚಿಯ ಮೇಲೆ ಸ್ವಲ್ಪ ಹೊತ್ತು ಕೂತು ಬಳಿಕ ಬಂದು ನಿದ್ದೆ ಮಾಡುತ್ತಿದ್ದರು.. ಒಂದು ದಿನ ಸಚಿನ್‌ಗೆ ಹೇಳಿದೆ, ನನಗೆ ಭಯವಾಗುತ್ತಿದೆ. ನೀನು ರಾತ್ರಿ ಏನು ಮಾಡುತ್ತಿದ್ದೆ ಎಂದು ಕೇಳಿದಾಗ ಅವರು ನನಗೆ ರಾತ್ರಿ ಓಡಾಡುವ ಅಭ್ಯಾಸವಿದೆ ಎಂದಿದ್ದರು' ಎಂದು ಸೌರವ್ ಗಂಗೂಲಿ ಸಂದರ್ಶನದಲ್ಲಿ ತಿಳಿಸಿದ್ದಾರೆ.
Comments