ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಎಂಎಸ್ ಧೋನಿ..!

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಬಳಿಕ ತವರಿಗೆ ವಾಪಾಸ್ಸಾಗಿರುವ ಮಹೇಂದ್ರ ಸಿಂಗ್ ಧೋನಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದೀಗ ಧೋನಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.ಜಾಹೀರಾತು ಒಂದರಾ ಶೂಟಿಂಗ್‌ಗಾಗಿ ಎಂ ಎಸ್ ಧೋನಿ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಜಾಹೀರಾತಿಗಾಗಿ ವಿವಿಧ ಪೋಸ್ ನೀಡಿರುವ ಧೋನಿ, ಬಾಲಿವುಡ್ ನಟರನ್ನೇ ನಾಚಿಸುವಂತೆ ಸಖತ್ತಾಗಿಯೇ ಪೋಸ್ ನೀಡಿದ್ದಾರೆ. ಧೋನಿಯ ಎಂಡೋರ್ಸ್‌ಮೆಂಟ್, ಜಾಹೀರಾತು ಸೇರಿದಂತೆ ಇತರ ವ್ಯವಹಾರಗಳನ್ನ ರಿತಿ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ನೋಡಿಕೊಳ್ಳುತ್ತಿದೆ. ಧೋನಿಯ ಆಪ್ತ ಅರುಣ್ ಪಾಂಡೆ ರೀತಿ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಮುಖ್ಯಸ್ಥರಾಗಿದ್ದಾರೆ. ಇದೀಗ ಹೊಸ ಜಾಹೀರಾತಿನಲ್ಲಿ ಎಂ ಎಸ್ ಧೋನಿ ಅಭಿಮಾನಿಗಳನ್ನ ಮಾತ್ರವಲ್ಲ, ಗ್ರಾಹಕರನ್ನು ಕೂಡ ಮೋಡಿ ಮಾಡಲು ಸಿದ್ದರಾಗಿದ್ದಾರೆ. ರಿತಿ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಧೋನಿ ಜಾಹೀರಾತು ಶೂಟಿಂಗ್ ಚಿತ್ರಗಳನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದೆ. ಆದರೆ ಈ ಕುರಿತು ಹೆಚ್ಚಿನ ಮಾಹಿತಿಗಳು ಬಹಿರಂಗವಾಗಿಲ್ಲ
Comments