ವಿರಾಟ್ ಕೊಹ್ಲಿಗಿಂತ ಭಾರತೀಯರಿಗೆ ಧೋನಿಯೇ ಅಚ್ಚುಮೆಚ್ಚು..!
ಭಾರತೀಯರು ಹೆಚ್ಚು ಇಷ್ಟಪಡುವ ಕ್ರೀಡಾ ಸೆಲೆಬ್ರಿಟಿಗಳು ಯಾರು ಎನ್ನುವ ಸಮೀಕ್ಷೆಯನ್ನು ನಡೆಸಲಾಯಿತು. ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್‌ರನ್ನು ಹಿಂದಿಕ್ಕಿರುವ ಎಂ.ಎಸ್.ಧೋನಿ ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ..
ಭಾರತೀಯರು ಅತಿಹೆಚ್ಚು ಇಷ್ಟಪಡುವ ವ್ಯಕ್ತಿಗಳ ಪಟ್ಟಿಯಲ್ಲಿ ಧೋನಿ 2ನೇ ಸ್ಥಾನ ಪಡೆದಿದ್ದಾರೆ. ಮೊದಲ ಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇದ್ದಾರೆ. yougov.co.uk ಎನ್ನುವ ಇಂಗ್ಲೆಂಡ್‌ನ ವೆಬ್‌ಸೈಟ್ ನಡೆಸಿದ್ದಂತಹ ಸಮೀಕ್ಷೆಯಲ್ಲಿ ಮಹೇಂದ್ರ ಸಿಂಗ್ ಧೋನಿಗೆ ಶೇ.7.7 ರಷ್ಟು ಮತಗಳು ಬಿದ್ದಿವೆ. ಶೇ.6.8ರಷ್ಟು ಮತಗಳನ್ನು ಪಡೆದಿರುವ ಸಚಿನ್ ತೆಂಡುಲ್ಕರ್ ಕ್ರೀಡಾಪಟುಗಳ ಪೈಕಿ 2ನೇ ಸ್ಥಾನ ಪಡೆದುಕೊಂಡಿದ್ದಾರೆ.
Comments