ಪ್ರಸಕ್ತ ವರ್ಷದಲ್ಲಿ ಅತೀ ಹೆಚ್ಚು ತೆರಿಗೆ ಪಾವತಿಸಿರುವ ಧೋನಿ..!
ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಸಾಧನೆ ಮಾಡುತ್ತಿರುವ ಟೀಂ ಇಂಡಿಯಾದ ಮಾಜಿ ನಾಯಕನಾದ ಮಹೇಂದ್ರ ಸಿಂಗ್ ಧೋನಿ ಅವರು ಮತ್ತೊಂದು ದಾಖಲೆಯನ್ನು ಇದೀಗ ನಿರ್ಮಿಸಿದ್ದಾರೆ.
ಧೋನಿಯವರು 2017-18ರ ಆದಾಯ ತೆರಿಗೆ ಮೌಲ್ಯಮಾಪನದ ಪ್ರಕಾರ ವರ್ಷದಲ್ಲಿ ಅತೀ ಹೆಚ್ಚು ತೆರಿಗೆಯನ್ನು ಪಾವತಿಸಿದ್ದಾರೆ. ಈ ಮೂಲಕ ಜಾರ್ಖಂಡ್ ರಾಜ್ಯದಲ್ಲಿಯೇ ವೈಯಕ್ತಿಕವಾಗಿ ಅತೀ ಹೆಚ್ಚು ತೆರಿಗೆ ಪಾವತಿಸಿರುವ ತೆರಿಗೆದಾರ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ.ಪ್ರಸಕ್ತ ವರ್ಷದಲ್ಲಿ ಧೋನಿಯವರು ಬರೋಬ್ಬರಿ 12.17 ಕೋಟಿ ರೂಪಾಯಿ ತೆರಿಗೆಯನ್ನು ಪಾವತಿಸಿದ್ದಾರೆ.
Comments