ಬೆಂಗಳೂರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಪರ ನಿಂತ ಯುವರಾಜ್ ಸಿಂಗ್
ಇತ್ತಿಚಿಗೆ ಟೀಂ ಇಂಡಿಯಾ ಆಟಗಾರರ ಗಾಯದ ಸಮಸ್ಯೆಗಳನ್ನು ಕುರಿತು ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯ ವಿರುದ್ಧ ಕೇಳಿಬರುತ್ತಿರುವ ಆರೋಪದ ವರದಿಗಳನ್ನು ಟೀಂ ಇಂಡಿಯಾದ ಆಟಗಾರರಾದ ಯುವರಾಜ್ ಸಿಂಗ್ ಅವರು ಅಲ್ಲಗೆಳೆದಿದ್ದಾರೆ.
ಈ ವಿಷಯವಾಗಿ ಟ್ವೀಟ್ ಮಾಡಿರುವಂತಹ ಯುವರಾಜ್ ಸಿಂಗ್, ನಾನು ಎನ್‍ಸಿಎ ಕುರಿತ ಅನುಭವನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ. ನಾನು ಮಾರಕ ಕ್ಯಾನ್ಸರ್ ನಿಂದ ಹೊರ ಬರಲು ಬೆಂಗಳೂರು ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯು ಸಹಕಾರವನ್ನು ನೀಡಿತ್ತು. ಬಿಸಿಸಿಐ ನಿರಂತರವಾಗಿ ಆಟಗಾರರ ಗಾಯದ ಸಮಸ್ಯೆಗಳನ್ನು ಬಹುಬೇಗ ನಿವಾರಿಸಲು ಕಾರ್ಯನಿರ್ವಹಿಸುತ್ತಿದ್ದು, ದೇಶದ ಉತ್ತಮ ತರಬೇತುದಾರರು ಹಾಗೂ ವೈದ್ಯರನ್ನು ನಿಯೋಜಿಸಿದೆ ಎಂದು ತಿಳಿಸಿದ್ದಾರೆ.
Comments