ಹಾಕಿ ಟೆಸ್ಟ್ ಸರಣಿಯಲ್ಲಿ ಕಿವೀಸ್ ಮಣಿಸಿದ ಭಾರತ
ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳಲ್ಲಿ ಭಾರತ ಹಾಕಿ ತಂಡವು ಟೆಸ್ಟ್ ಸರಣಿಯಲ್ಲಿ ಗೆಲುವಿನ ಮೂಲಕ ಆರಂಭವನ್ನು ಮಾಡಿದೆ. ಮೊದಲ ಪಂದ್ಯದಲ್ಲಿ 4-2 ಗೋಲುಗಳ ಅಂತರದಿಂದ ಕಿವೀಸ್ ತಂಡವನ್ನು ಭಾರತ ಸೋಲಿಸಿದೆ.
ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದ ಕ್ಯಾಂಪಸ್ನ ಕ್ರೀಡಾಂಗಣದಲ್ಲಿ ನಡೆದಂತಹ ಪಂದ್ಯದಲ್ಲಿ ಭಾರತ ತಂಡದ ಪರ ರುಪಿಂದರ್ ಸಿಂಗ್ (2, 34ನೇ ನಿಮಿಷ), ಮನ್ದೀಪ್ ಸಿಂಗ್ (15ನೇ ನಿಮಿಷ), ಹರ್ಮನ್ಪ್ರೀತ್ ಸಿಂಗ್ (38ನೇ ನಿಮಿಷ) ಗೋಲು ಬಾರಿಸಿದರು. ಹಾಗೆಯೇ ಕಿವೀಸ್ನ ಸ್ಟೆಫನ್ ಜೆನ್ನೆಸ್ 26 ಹಾಗೂ 55ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಎಲ್ಲರ ಗಮನವನ್ನು ಸೆಳೆದರು.
Comments