ಬೌಂಡರಿ ಲೈನ್ ನಲ್ಲಿ ಶಾರುಕ್ ಖಾನ್ ಹಿಡಿದಿರೋ ಸೂಪರ್ ಕ್ಯಾಚ್..!
ತಮಿಳುನಾಡಿನಲ್ಲಿ ನಡೆಯುತ್ತಿರುವ ತಮಿಳುನಾಡು ಸೂಪರ್ ಲೀಗ್ ನಲ್ಲಿ ಶಾರುಕ್ ಖಾನ್ ಔಟ್ ಸ್ಟ್ಯಾಂಡಿಗ್ ಕ್ಯಾಚ್ ಹಿಡಿದು ಇದೀಗ ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿದ್ದಾರೆ. ಬೌಂಡರಿ ಲೈನ್ ನಲ್ಲಿ ಹಿಡಿದ ಬ್ರೆಥ್ ಟೇಕಿಂಗ್ ಕ್ಯಾಚ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಶಾರುಕ್ ಖಾನ್ ಟಿ- 20 ಲೀಗ್ ನಲ್ಲಿ ಲೈಕಾ ಕೋವಿಯಾ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಪ್ರಶಾಂತ್ ರಾಜೇಶ್ ಅವರ ಬೌಲಿಂಗ್ ನಲ್ಲಿ ರಾಜಾಮರಿ ಹೊಡೆದ ಬಾಲನ್ನು ಶಾರುಕ್ ಖಾನ್ ಗಾಳಿಯಲ್ಲಿ ನೆಗೆದು ಕ್ಯಾಚ್ ಹಿಡಿದಿದ್ದಾರೆ. ಸ್ವಲ್ಪ ಆ ಕಡೆ ಈ ಕಡೆ ಆಯತಪ್ಪಿ ಬಾಲ್ ನೊಂದಿಗೆ ಬೌಂಡರ್ ಗೆರೆ ದಾಟಬೇಕಿದ್ದಂತಹ ಶಾರುಕ್ ಕ್ಯಾಚ್ ಹಿಡಿದ ನಂತರದಲ್ಲಿ ಬ್ಯಾಲೆನ್ಸ್ ಕಾಯ್ದುಕೊಳ್ಳುವಲ್ಲಿ ಸಕ್ಸಸ್ ಆದರು. ಕೊನೆಗೆ ಈ ರೋಚಕ ಪಂದ್ಯವು ಟೈನಲ್ಲಿ ಮುಕ್ತಾಯಗೊಂಡಿದೆ.
Comments