ಇಂಗ್ಲೆಂಡ್ ವಿರುದ್ದ ಭಾರತಕ್ಕೆ ಭರ್ಜರಿ ಗೆಲುವು..!

13 Jul 2018 10:55 AM | Sports
436 Report

ಇಂಗ್ಲೆಂಡ್ ವಿರುದ್ಧದ ಟಿ 20 ಸರಣಿಯನ್ನು ಗೆದ್ದು ಗೆಲುವಿನ ನಗೆ ಬೀರುತ್ತಿರುವ ಟೀಂ ಇಂಡಿಯಾ ಇದೀಗ ಏಕದಿನ ಸರಣಿಯ ಮೊದಲ ಪಂದ್ಯದಲ್ಲೂ ಭರ್ಜರಿ ಜಯವನ್ನು ಸಾಧಿಸಿದೆ.

ನ್ಯಾಟಿಂಗ್​ಹ್ಯಾಮ್​ನ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದಂತಹ ಇಂಗ್ಲೆಂಡ್​ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್​ಗಳ ಭರ್ಜರಿ ಜಯವನ್ನು ಸಾಧಿಸಿದೆ.  ಇಂಗ್ಲೆಂಡ್​ ನೀಡಿದದಂತಹ  268 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದಂತಹ  ಭಾರತ ಕೇವಲ 40.1 ಓವರ್​ಗಳಲ್ಲಿ 2 ವಿಕೆಟ್​ಕಳೆದುಕೊಂಡು 269 ರನ್ ಗಳಿಸಿ ಗೆಲುವಿನ ನಗೆಯನ್ನು ಬೀರಿತು.

Edited By

Manjula M

Reported By

Manjula M

Comments