ವಿಶ್ವಕಪ್ ಪುಟ್ಬಾಲ್ ಟೂರ್ನಿ: ಕ್ರೊವೇಶಿಯಾಗೆ ಚೊಚ್ಚಲ ವಿಶ್ವಕಪ್ ಫೈನಲ್ ಸಂಭ್ರಮ

ಮಾಸ್ಕೊ:- ಕ್ರೊವೇಶಿಯಾ ಕೊನೆಕ್ಷಣದಲ್ಲಿ ಪ್ರದರ್ಶಿಸಿದಂತಹ ಪ್ರತಿ ಹೋರಾಟದಿಂದಾಗಿ ಫಿಫಾ ವಿಶ್ವಕಪ್ ಫುಟ್ಬಾಲ್-2018 ಟೂರ್ನಿಯ ಫೈನಲ್‌ಗೇರುವ ಇಂಗ್ಲೆಂಡ್ ಕನಸು ಇದೀಗ ಭಗ್ನವಾಗಿದೆ.
2-1 ಗೋಲುಗಳಿಂದ ಇಂಗ್ಲೆಂಡ್ ಸವಾಲನ್ನು ಮುರಿದು ಕ್ರೊವೇಶಿಯಾ ಮೊಟ್ಟಮೊದಲ ಬಾರಿಗೆ ವಿಶ್ವಕಪ್ ಫೈನಲ್ ಗೆ ಲಗ್ಗೆ ಇಟ್ಟಿದೆ. ಫೈನಲ್‌ನಲ್ಲಿ ಕ್ರೊವೇಶಿಯಾ ಹಾಗೂ ಫ್ರಾನ್ಸ್ ಮುಖಾಮುಖಿಯಾಗಲಿದೆ. ಮಾರಿಯೊ ಮಂಡ್ಸ್‌ಕಿಕ್ ಅವರು ಹೆಚ್ಚುವರಿ ವೇಳೆಯ ದ್ವಿತೀಯಾರ್ಧದಲ್ಲಿ ಹೊಡೆದ ಗೋಲು ಇಂಗ್ಲೆಂಡ್ ತಂಡವನ್ನು ಹೊರದೂಡುವಂತೆ ಮಾಡಿತು.. ಇವಾನ್ ಪೆರಿಸಿಕ್ ಗೋಲಿನೊಂದಿಗೆ ಸಮಬಲ ಸ್ಥಾಪಿಸಿದ ಕ್ರೊವೇಶಿಯಾ ಪಂದ್ಯದ ಸ್ಥಿತಿಯನ್ನೆ ಬದಲಿಸಿತು. ಪೆರಿಸಿಕ್ ಅವರಿಗೂ ಮತ್ತೆರಡು ಗೋಲು ಗಳಿಸುವ ಅವಕಾವನ್ನು ಕೂಡ ಕಳೆದುಕೊಂಡಿತು..
Comments