ಟ್ವೆಂಟಿ-20ಯಲ್ಲಿ ಹೊಸ ದಾಖಲೆ ಬರೆದ ಧೋನಿ..!

09 Jul 2018 10:57 AM | Sports
509 Report

ಟೀಂ ಇಂಡಿಯಾದ ಮಾಜಿ ನಾಯಕರಾದ ಎಂಎಸ್ ಧೋನಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಎರಡು ಹೊಸ ದಾಖಲೆಯನ್ನು ಮಾಡಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.

ಇಂಗ್ಲೆಂಡ್ ವಿರುದ್ಧ ಭಾನುವಾರ ನಡೆದಂತಹ 3ನೇ ಟಿ-20 ಪಂದ್ಯದಲ್ಲಿ ಸಿದ್ದಾರ್ಥ್ ಕೌಲ್ ಎಸೆದ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಪ್ಲಂಕೆಟ್ ನೀಡಿದ ಕ್ಯಾಚ್ ಪಡೆದ ಧೋನಿ ಒಂದೇ ಪಂದ್ಯದಲ್ಲಿ ಐದು ಕ್ಯಾಚ್‌ಗಳನ್ನು ಪಡೆದ ಮೊದಲ ವಿಕೆಟ್‌ಕೀಪರ್ ಎಂಬ ಹೆಗ್ಗಳಿಕೆಗೆ ಇದೀಗ ಪಾತ್ರರಾಗಿದ್ದಾರೆ. ಧೋನಿ ಟಿ-20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ 50 ಕ್ಯಾಚ್ ಪಡೆದ ಮೊದಲ ವಿಕೆಟ್‌ಕೀಪರ್ ಎಂಬ ಕೀರ್ತಿಗೂ ಕೂಡ ಪಾತ್ರದಾರರಾಗಿದ್ದಾರೆ. ದೀಪಕ್ ಚಹಾರ್ ಎಸೆತದಲ್ಲಿ ಜೇಸನ್ ರಾಯ್ ಕ್ಯಾಚ್ ಪಡೆಯುವುದರ  ಈ ಸಾಧನೆಯನ್ನು ಮಾಡಿದರು. ಪಂದ್ಯದಲ್ಲಿ 5 ಕ್ಯಾಚ್ ಪಡೆದ ಧೋನಿ ಕ್ರಿಸ್ ಜೋರ್ಡನ್‌ರನ್ನು ಬುಲೆಟ್ ಥ್ರೋ ಮೂಲಕ ರನೌಟ್ ಮಾಡಿ ಎಲ್ಲರ ಗಮನವನ್ನು ಸೆಳೆದರು.

Edited By

Manjula M

Reported By

Manjula M

Comments