ಬ್ರೆಜಿಲ್ನ್ನು ವಿಶ್ವಕಪ್ ಪುಟ್ ಬಾಲ್ ಟೂರ್ನಿಯಿಂದ ಹೊರದೂಡಿದ ಬೆಲ್ಜಿಯಂ

ಮಾಸ್ಕೋ- ಫಿಫಾ ವಿಶ್ವಕಪ್ ಫುಟ್ಬಾಲ್ 2018 ರ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯವು ರೋಚಕವಾಗಿ ಕೊನೆಗೊಂಡಿದೆ. ಬ್ರೆಜಿಲ್ ತಂಡವನ್ನು 2-1ರ ಅಂತರದಲ್ಲಿ ಸೋಲಿಸಿದ ಬೆಲ್ಜಿಯಂ ಸೆಮೀಸ್ಗೆ ಲಗ್ಗೆ ಇಟ್ಟ ಸಂತಸದಲ್ಲಿದೆ.
ಜಿದ್ದಾಜಿದ್ದಿನಿಂದ ಕೂಡಿದ್ದ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆರಂಭದಿಂದಲೇ ಬೆಲ್ಜಿಯಂ ಪಂದ್ಯದ ಮೇಲೆ ಹಿಡಿತವನ್ನು ಸಾಧಿಸಿತ್ತು. ಬೆಲ್ಜಿಯಂ ಪರ ಫೆರ್ನಾಂಡಿನ್ಹೋ 13ನೇ ನಿಮಿಷದಲ್ಲಿ ಗೋಲ್ ಗಳಿಸುವುದರ ಮೂಲಕ ಪಂದ್ಯದಲ್ಲಿ ಬೆಲ್ಜಿಯಂ ತಂಡ ಮೇಲುಗೈ ಸಾಧಿಸುವಂತೆ ಮಾಡಿದರು. ಪ್ರಥಮಾರ್ಧ ಆಟ ಮುಗಿಯುವುದಕ್ಕೂ ಮೊದಲೇ ಅಂದರೆ 2-0 ಅಂತರದಲ್ಲಿ ಬ್ರೆಜಿಲ್ ವಿರುದ್ಧ ಬೆಲ್ಜಿಯಂ ಮೇಲುಗೈ ಸಾಧಿಸಿತ್ತು. ಮುಂದಿನ ಆಟದಲ್ಲಿ ಬೆಲ್ಜಿಯಂ ಎದುರಾಳಿ ತಂಡ ಗೋಲ್ ಗಳಿಸದೇ ಇರುವಂತೆ ಬಹಳಷ್ಟು ಎಚ್ಚರ ವಹಿಸಿತು. ಆದರೆ ಪಂದ್ಯದ 76 ನೇ ನಿಮಿಷದಲ್ಲಿ ಬ್ರೆಜಿಲ್ನ ರೆನಾಟೋ ಆಗುಸ್ಟೋ ಗೋಲ್ ಗಳಿಸುವುದರ ಮೂಲಕ ಗೋಲ್ನ ಅಂತರವನ್ನು 2-1 ಕ್ಕೆ ಕುಗ್ಗಿಸಿದರು. ಆರನೇ ಬಾರಿಗೆ ಪ್ರಶಸ್ತಿ ಪಡೆಯವ ಆಸೆಯಲ್ಲಿದ್ದ ಬ್ರೆಜಿಲ್, ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದು, ಬಾರಿ ಮುಖಭಂಗವನ್ನು ಅನುಭವಿಸಿತು.
Comments