37 ನೇ ವಸಂತಕ್ಕೆ ಕಾಲಿಟ್ಟ ಎಂಎಸ್ ಧೋನಿ: ಹ್ಯಾಪಿ ಬರ್ತಡೇ ಧೋನಿ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಇಂದು 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಭಾರತೀಯ ಕ್ರಿಕೆಟ್ ಕಂಡಂತಹ ಅತ್ಯಂತ ಯಶಸ್ವಿ ನಾಯಕರಲ್ಲಿ ಧೋನಿ ಕೂಡ ಒಬ್ಬರು. ಧೋನಿ ಡಿಸೆಂಬರ್ 23, 2004ರಂದು ಬಾಂಗ್ಲಾದೇಶದ ವಿರುದ್ಧ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆಯನ್ನು ಮಾಡಿದ್ದಾರೆ. ಅದಾದ ಒಂದು ವರ್ಷದ ನಂತರ ಅಂದರೆ ಡಿಸೆಂಬರ್ 2, 2005ರಲ್ಲಿ ಧೋನಿ ಟೆಸ್ಟ್ ತಂಡದಲ್ಲೂ ಸ್ಥಾನವನ್ನು ಪಡೆದುಕೊಳ್ಳುತ್ತಾರೆ.
ಅಂದಿನಿಂದ ಇಂದಿನವರೆಗೆ ಕೂಡ ಧೋನಿ ಕ್ರಿಕೆಟ್ಗೆ ನೀಡಿದ ಕೊಡುಗೆ ಅಪಾರ ಏಕದಿನ, ಟಿ-20ಕ್ರಿಕೆಟ್ನಲ್ಲಿ ಗ್ರೇಟ್ ಫಿನಿಶರ್ ಎಂಬ ಬಿರುದು ಮಹೇಂದ್ರ ಸಿಂಗ್ ಧೋನಿಗಿದೆ. 2007ರಲ್ಲಿ ಏಕದಿನ ಪಂದ್ಯಕ್ಕೆ ನಾಯಕರಾಗಿದ್ದ ರಾಹುಲ್ ದ್ರಾವಿಡ್ ರಾಜೀನಾಮೆ ಕೊಟ್ಟ ಬಳಿಕ ಧೋನಿಗೆ ತಂಡದ ನಾಯಕನಾಗುತ್ತಾನೆ. ಪಂದ್ಯ ಸೋಲುವ ಹಂತದಲ್ಲಿದ್ದಾಗ ಹೇಗಾದರೂ ಮಾಡಿ ಪಂದ್ಯದ ಗತಿಯನ್ನೇ ಬದಲಿಸಬಲ್ಲಂತಹ ಸಾಮರ್ಥ್ಯ ಮಹೇಂದ್ರ ಸಿಂಗ್ ಧೋನಿಗಿದೆ. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಧೋನಿಯವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಹಾರೈಸೋಣ
Comments