ಇಂದು ಹೈವೋಲ್ಟೇಜ್ ಫುಟ್ಬಾಲ್ ಪಂದ್ಯ: ಗೂಳಿಗಳ ಕಾಳಗಕ್ಕೆ ಕ್ಷಣಗಣನೆ…ಹೆಚ್ಚಾಯ್ತು ಅಭಿಮಾನಿಗಳ ಕಾತುರ…

ಮಾಸ್ಕೋ:-ಇಂದಿನಿಂದ ಹೈ ಟೆನ್ಷನ್ ಕ್ವಾರ್ಟರ್ ಫೈನಲ್ ಪಂದ್ಯಗಳು ಪ್ರಾರಂಭವಾಗಲಿವೆ. ಇಂದು ಸಾಯಂಕಾಲ 7:30ಕ್ಕೆ ಫ್ರಾನ್ಸ್ ಮತ್ತು ಉರುಗ್ವೆ ತಂಡಗಳು ಮುಖಾಮುಖಿ ಕಾದಾಟಕ್ಕೆ ಇಳಿಯಲಿವೆ.
ಉರುಗ್ವೆ ಲೀಗ್ ಹಂತದ ಎಲ್ಲ ಪಂದ್ಯಗಳನ್ನು ಗೆದ್ದು ಉತ್ಸಾಹದಿಂದಲೇ ನಾಕೌಟ್ ಹಂತಕ್ಕೆ ತಲುಪಿತ್ತು. ನಂತರ ಪ್ರಬಲ ತಂಡಗಳನ್ನು ಸೋಲಿಸಿ ಉರುಗ್ವೆ ಕ್ವಾರ್ಟರ್ ಫೈನಲ್ ತಲುಪಿತ್ತು. ಇಂದಿನ ಮೊದಲ ಪಂದ್ಯದಲ್ಲಿ ಪ್ರಬಲ ತಂಡವಾದ ಫ್ರಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಬಹಳ ರೋಚಕವಾಗಿದ್ದು ಎರಡು ತಂಡಗಳ ನಡುವಣ ಪಂದ್ಯ ಫುಟ್ಬಾಲ್ ಅಭಿಮಾನಿಗಳಲ್ಲಿ ಕ್ಷಣಕ್ಷಣಕ್ಕೂ ಕುತೂಹಲವನ್ನು ಹೆಚ್ಚಿಸುತ್ತಿವೆ. ಕ್ಷಣಕ್ಷಣಕ್ಕೂ ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಈ ಪಂಧ್ಯವು ಹೈವೊಲ್ಟೇಜ್ ಪಂದ್ಯವಾಗಲಿದೆ. ನೆಚ್ಚಿನ ತಂಡವಾಗಿ ಮೊದಲನೆ ಸ್ಥಾನದಲ್ಲಿರುವ ಬ್ರೆಜಿಲ್ ಇಂದು ರಾತ್ರಿ 11:30ಕ್ಕೆ ನಡೆಯಲಿರುವ ಪಂದ್ಯದಲ್ಲಿ ಬೆಲ್ಜಿಯಂ ತಂಡದ ಜೊತೆ ಮುಖಾಮುಖಿಯಾಗಲಿದೆ. ಬೆಲ್ಜಿಯಂ ಸಹ ಬ್ರೆಜಿಲ್ ಮಣಿಸಿ ಸೆಮಿಸ್ಗೆ ತೆರಳಲು ಸಿದ್ದತೆಯನ್ನು ನಡೆಸಿದೆ. ಹೀಗಾಗಿ ಎರಡೂ ತಂಡಗಳ ನಡುವಣ ಇಂದಿನ ಪಂದ್ಯ ಅಭಿಮಾನಿಗಳಲ್ಲಿ ಕ್ಯೂರಾಸಿಟಿಯನ್ನು ಹೆಚ್ಚಿಸಿದೆ.
Comments