ಕೆ ಎಲ್ ರಾಹುಲ್ ಆಸೆ ಈಡೇರಿಸಿದ ಆ ಶತಕ ಯಾವುದು ಗೊತ್ತಾ?

ಭಾರತದ ಕ್ರಿಕೆಟ್ ಪ್ರೇಮಿಗಳ ಪಾಲಿನ ಫೇವರೇಟ್ ಅಂದರೆ ಅದು ಕೆ ಎಲ್ ರಾಹುಲ್. ಮೊದಲ ಟಿ-ಟ್ವೆಂಟಿಯಲ್ಲಿ ಭರ್ಜರಿ ಶತಕವನ್ನು ಬಾರಿಸಿದ ಕನ್ನಡಿಗ.
ಪಂದ್ಯ ಮುಕ್ತಾಯದ ವೇಳೆಯಲ್ಲಿ ತಮ್ಮ ಸಹ ಆಟಗಾರರಾದ ದಿನೇಶ್ ಕಾರ್ತಿಕ್ ಅವರೊಂದಿಗೆ ತಂಡದಲ್ಲಿ ತಮ್ಮ ಸ್ಥಾನ ಹಾಗೂ ಪ್ರದರ್ಶನ ಕುರಿತು ಮಾತನಾಡಿದ್ದಾರೆ. ಮೊದಲ ಪಂದ್ಯದ ಶತಕ ಸಾಕಷ್ಟು ತೃಪ್ತಿ ನೀಡಿದೆ. ವರ್ಷಗಳಿಂದ ಕಾಡುತ್ತಿದ್ದಂತಹ ಶತಕದ ಆಸೆ ಈಡೇರಿದೆ ಎಂದು ಹೇಳಿಕೊಂಡಿದ್ದಾರೆ. ಈ ನಡುವೆ ಒಂದಷ್ಟು ಅರ್ಧಶತಕ ಬಾರಿಸಿದರೂ ಒಂದು ದೊಡ್ಡ ಇನ್ನಿಂಗ್ಸ್ಗಾಗಿ ಕಾಯುತ್ತಿದ್ದೆ ಎಂದು ತಿಳಿಸಿದ್ದಾರೆ.ತಂಡದಿಂದ ಹೊರಗುಳಿದ ಸಂದರ್ಭದಲ್ಲಿ ನನ್ನ ಸ್ಥಾನದ ಕುರಿತಾಗಿ ಸಾಕಷ್ಟು ಅಧ್ಯಯನ ನಡೆಸಿ ಕೊಂಡಿದ್ದೇನೆ.ಐಪಿಲ್ನ ಅದ್ಭುತ ಪ್ರದರ್ಶನ ನನ್ನಲ್ಲಿ ಸಾಕಷ್ಟು ಕಾನ್ಫಿಡೆನ್ಸ್ ಮೂಡಿಸಿದೆ ಎಂದು ತಿಳಿಸಿದ್ದಾರೆ.
Comments