ಟಿ20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದ ಕೊಹ್ಲಿ

ಟೀಂ ಇಂಡಿಯಾದ ನಾಯಕನಾದ ವಿರಾಟ್ ಕೊಹ್ಲಿ ಚುಟುಕು ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತೀವೇಗದಲ್ಲಿ 2000 ರನ್ ಪೂರೈಸಿದ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಇದೀಗ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.
ಓಲ್ಡ್ ಟ್ರಾಫ್ರೋರ್ಡ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ದದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ 8 ರನ್‌ಗಳಿಸುತ್ತಿದ್ದಂತೆಯೇ, 2000 ಸಾವಿರ ರನ್ ಪೂರೈಸಿದರು. ಕೊಹ್ಲಿ 60 ಪಂದ್ಯಗಳ 56 ಇನ್ನಿಂಗ್ಸ್‌ಗಳಲ್ಲಿ 2000 ರನ್ ಗಳನ್ನು ಪೂರೈಸಿದರು. ಅತೀ ವೇಗದಲ್ಲಿ 2000 ರನ್ ಪೂರೈಸಿದ ಕ್ರಿಕೆಟಿಗರ ಪೈಕಿ ಮೊದಲ ಸ್ಥಾನವನ್ನು ವಿರಾಟ್ ಕೊಹ್ಲಿ ಪಡೆದರು. ಈ ಪಂದ್ಯದಲ್ಲಿ ಕೊಹ್ಲಿ ಅಜೇಯ 20 ರನ್ ಮೂಲಕ ತಂಡಗ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನುನಿರ್ವಹಿಸಿದರು.
Comments