ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ತನ್ನದೇ ದಾಖಲೆ ಮುರಿದ ಆರೋನ್ ಫಿಂಚ್
ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ತ್ರಿಕೋನ ಟೂರ್ನಿಯ ಮೂರನೇ ಪಂದ್ಯದಲ್ಲಿ ಉತ್ತಮ ಆಟ ಪ್ರರ್ಶಿಸಿದ 31 ವರ್ಷದ ಫಿಂಚ್ 76 ಎಸೆಗಳಲ್ಲಿ 10 ಸಿಕ್ಸರ್, 16 ಬೌಂಡರಿಗಳ ನೆರವಿನಿಂದ 172 ರನ್ ಗಳಿಸುವ ಮೂಲಕ ದಾಖಲೆಯನ್ನು ಬರೆದಿದ್ದಾರೆ. ಆದರೆ ಪಂದ್ಯದ ಕೊನೆಯಲ್ಲಿ ಹಿಟ್ ವಿಕೆಟ್ ಆಗುವ ಮೂಲಕ ಪಂದ್ಯದಲ್ಲಿ ಔಟಾದರು.
ಈ ಪಂದ್ಯದಲ್ಲಿ ಫಿಂಚ್ ಹಾಗೂ ಆರಂಭಿಕ ಆಟಗಾರ ಡಾರ್ಸಿ ಶಾರ್ಟ್ ಜೋಡಿಯು 19.2 ಓವರ್‍ಗಳಲ್ಲಿ 223 ರನ್ ನೀಡುವ ಮೂಲಕ ಟಿ20 ಮಾದರಿಯಲ್ಲಿ ಆಸೀಸ್ ಪರ 200 ಪ್ಲಸ್ ರನ್ ಗಳಿಸಿದ ಜೋಡಿ ಎಂಬ ಇತಿಹಾಸವನ್ನು ಈ ಜೋಡಿ ಸೃಷ್ಟಿಸಿದರು. ಡಾರ್ಸಿ ಶಾರ್ಟ್ 42 ಎಸೆತಗಳಲ್ಲಿ 46 ಗಳಿಸಿ ಫಿಂಚ್ ಗೆ ಸಾಥ್ ಅನ್ನು ನೀಡಿದರು. ಟಿ20 ಮಾದರಿಯಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರರಲ್ಲಿ ಆರೋನ್ ಫಿಂಚ್ ಮೊದಲ ಸ್ಥಾನದಲ್ಲಿದ್ದರು. 2013 ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಪಂದ್ಯದಲ್ಲಿ ಫಿಂಚ್ 156 ಗಳಿಸಿ ದಾಖಲೆಯನ್ನು ಬರೆದಿದ್ದರು. ಅಂತಿಮವಾಗಿ 20 ಓವರ್ ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡ ಆಸೀಸ್ 229 ಗಳಿಸಿತ್ತು. ಆಸೀಸ್ ಬೃಹತ್ ಮೊತ್ತವನ್ನು ಬೆನ್ನತ್ತಿದ್ದಂತಹ ಜಿಂಬಾಬ್ವೆ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿ ಸೋಲನ್ನು ಕಂಡಿತ್ತು.
Comments