ಅಂತರರಾಷ್ಟ್ರೀಯ ಕ್ರಿಕೆಟ್'ಗೆ ಗುಡ್ ಬೈ ಹೇಳಿದ ಎಬಿಡಿ..!
ಆರ್ ಸಿ ಬಿ ಹಾಗೂ ತಂಡ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‍ಮನ್ ಆದ ಡಿವಿಲಿಯರ್ಸ್ ದಿಢೀರನೇ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಡಿವಿಲಿಯರ್ಸ್, ಆರ್‍ಸಿಬಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಪ್ಲೇಆಫ್‍ಗೇ ಹೋಗುವಲ್ಲಿ ತಂಡ ಎಡವಿತ್ತು ಆದ್ದರಿಂದಲೇ ನನಗೆ ತುಂಬಾ ಬೇಸರವಾಗಿದೆ ಎಂದು ತಿಳಿಸಿದ್ದ ಎಬಿಡಿ, ಹಸಿರು ಹಾಗೂ ಚಿನ್ನದ ಧಿರಿಸಿನಲ್ಲಿ ತಂಡದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಯಿಂದಲೇ ನನಗೆ ಬೇಜಾರಾಗಿದೆ ಎಂದು ತಿಳಿಸಿದ್ದಾರೆ.
ನಿವೃತ್ತಿ ಘೋಷಿಸಿರುವ ನಿರ್ಧಾರವು ಕಠಿಣವಾಗಿದ್ದರೂ ಕೂಡ ಇತ್ತೀಚೆಗೆ ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಗಳನ್ನು ಜಯಿಸಿರುವುದು ನನ್ನ ಕ್ರಿಕೆಟ್ ಜೀವನದಲ್ಲಿ ಚಿರಸ್ಮರಣೀಯವಾಗಿರುತ್ತದೆ ಎಂದಿದ್ದಾರೆ. ಮುಂದಿನ ವರ್ಷ ಏಕದಿನ ವಿಶ್ವಕಪ್ ಟೂರ್ನಿ ನಡೆಯುವುದರ ಮುಂಚೆಯೇ ದಕ್ಷಿಣ ಆಫ್ರಿಕಾ ತಂಡಕ್ಕೆ ಎಬಿಡಿ ನಿವೃತ್ತಿ ಘೋಷಿಸಿರುವುದೂ ದೊಡ್ಡ ಆಘಾತದ ಸುದ್ದಿಯಾಗಿದೆ. ನಾನು ನಿವೃತ್ತಿ ಘೋಷಿಸಿದ್ದರೂ ಕೂಡ ದಕ್ಷಿಣ ಆಫ್ರಿಕಾದ ನಾಯಕ ಡುಪ್ಲೆಸಿಸ್ ಇನ್ನೂ ಹೆಚ್ಚಿನ ಸರಣಿಗಳನ್ನು ಗೆಲ್ಲುವುದರೊಂದಿಗೆ ವಿಶ್ವಕಪ್‍ನಲ್ಲಿ ಮಿಂಚುವಂತಾಗಲಿ ಎಂದು ಶುಭ ಹಾರೈಸಿದರು.
Comments