ಈ ಸಲ ಕಪ್ ನಮ್ದೆ ಎನ್ನುತ್ತಿರುವ ಆರ್ಸಿಬಿಗೆ ಇಂದು ಅಗ್ನಿಪರೀಕ್ಷೆ..!

ಈ ಸಲ ಕಪ್ ನಮ್ದೆ ಎನ್ನುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಗ್ನಿಪರೀಕ್ಷೆ ಎದುರಾಗಿದೆ. ಜೈಪುರದಲ್ಲಿ ಇಂದು ಸಂಜೆ ನಾಲ್ಕು ಗಂಟೆಗೆ ರಾಜಸ್ತಾನ ರಾಯಲ್ಸ್ ವಿರುದ್ಧ ಆರ್ ಸಿ ಬಿ ಕಣಕ್ಕೆ ಇಳಿಯಲಿದ್ದು ಲೀಗ್ ಹಂತದಲ್ಲಿ ಆರ್ಸಿಬಿಗಿದು ಕೊನೆಯ ಪಂದ್ಯವಾಗಿದ್ದು ಅತ್ಯಂತ ಮಹತ್ವದ ಪಂದ್ಯ ಕೂಡ ಆಗಿದೆ.
ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಒಂದು ವೇಳೆ ಆರ್ ಸಿ ಬಿ ಸೋತರು ಪ್ಲೇ ಆಫ್ ರೇಸ್ ನಿಂದ ತಂಡ ಸಂಪೂರ್ಣವಾಗಿ ಹೊರಬೀಳುವುದಿಲ್ಲ. ಉಳಿದ ಪಂದ್ಯಗಳ ಫಲಿತಾಂಶಗಳು ಆರ್ ಸಿ ಬಿಯ ಭವಿಷ್ಯವನ್ನು ನಿರ್ಧರಿಸಲಿದೆ. ಡೆಲ್ಲಿ ಡೇರ್ ಡೆವಿಲ್ಸ್, ಪಂಜಾಬ್, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಆರ್ ಸಿ ಬಿ ಲೀಗ್ ಹಂತದ ತನ್ನ ಕೊನೆ ಪಂದ್ಯದಲ್ಲೂ ಇದೇ ವಿಶ್ವಾಸವನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ.
Comments