ಪೀಲ್ಡ್ ನಲ್ಲೆ ಕೊಹ್ಲಿ ಪಾದಕ್ಕೆ ಬಿದ್ದ ಅಭಿಮಾನಿ- ಕಾರಣ ಏನ್ ಗೊತ್ತಾ?

ಈ ಬಾರಿಯ ಐಪಿಎಲ್ ನಲ್ಲಿ ಅನೇಕ ರೀತಿಯ ಕುತೂಹಲಕರ ಘಟನೆಗಳು ನಡೆಯುತ್ತಲೇ ಇವೆ. ಕೆಲ ದಿನಗಳ ಹಿಂದೆ ಅಭಿಮಾನಿಯೊಬ್ಬ ಭದ್ರತೆಯನ್ನೂ ಕೂಡ ಲೆಕ್ಕಿಸದೆ ಭಾರತ ತಂಡದ ಮಾಜಿ ನಾಯಕರಾದ ಎಂ.ಎಸ್. ಧೋನಿ ಕಾಲಿಗೆ ಎರಗಿದ್ದ ಘಟನೆ ನಡೆದಿದ್ದು ಎಲ್ಲರಿಗೂ ಗೊತ್ತೆ ಇದೆ.
ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಆರ್ ಸಿ ಬಿ ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದ ವೇಳೆಯೂ ಇಂತಹದೇ ಘಟನೆಯೊಂದು ನಡೆದಿದೆ. ಕೊಹ್ಲಿ ರನ್ ಮಳೆ ಹರಿಸಲು ಆರಂಭಿಸುತ್ತಿದ್ದಂತೆ, ಅಭಿಮಾನಿಗಳ ಖುಷಿ ಎಲ್ಲೆ ಮೀರಿತ್ತು. ಈ ಮಧ್ಯೆ ಕೊಹ್ಲಿಯ ಕಟ್ಟಾ ಅಭಿಮಾನಿಯೊಬ್ಬ ಭದ್ರತೆಯನ್ನೂ ಕೂಡ ಲೆಕ್ಕಿಸದೆ ಮೈದಾನಕ್ಕೆ ನುಗ್ಗಿ ಕೊಹ್ಲಿ ಪಾದಕ್ಕೆ ಎರಗಿದ್ದಾನೆ.ಭದ್ರತಾ ಸಿಬ್ಬಂದಿ ಆತನನ್ನ ತಡೆಯಲು ಓಡಿ ಬಂದರೂ ಸಿಗದೆ, ಮೈದಾನಕ್ಕೆ ಹೋಗಿ. ಸೆಲ್ಫಿ ಕೂಡಾ ತೆಗೆದುಕೊಂಡಿದ್ದಾನೆ. ಕೊನೆಗೆ ಭದ್ರತಾ ಸಿಬ್ಬಂದಿ ಹೋಗಿ ಆತನನ್ನ ಎಳೆದು ಹೊರಗೆ ಕಳುಹಿಸಿದ್ದಾರೆ. ಅಭಿಮಾನಿಗಳಲ್ಲಿ ಅಭಿಮಾನ ಇರಬೇಕು ಆದರೆ ಈ ರೀತಿಯ ಹುಚ್ಚು ಅಭಿಮಾನ ಇರಬಾರದು.
Comments