ವಿರಾಟ್ ನ ಮುಂದಿನ ಮಾಸ್ಟರ್ ಪ್ಲಾನ್ : ಇಷ್ಟಕ್ಕೂ ಕೊಹ್ಲಿ ಹೇಳಿದ್ದೇನು?

14 May 2018 10:31 AM | Sports
1374 Report

ಇಂದು ವಿರಾಟ್ ಕೊಹ್ಲಿ ಪಡೆಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡಗಳು ಇಂದೋರ್ ನ ಹೋಳ್ಕರ್ ಮೈದಾನದಲ್ಲಿ ಮುಖಾಮುಖಿಯಾಗಲಿವೆ.

ಪಂಜಾಬ್ ತಂಡ 11 ಪಂದ್ಯಗಳನ್ನು ಆಡಿದ್ದು, 6 ಪಂದ್ಯಗಳ್ಲಲಿ ಜಯವನ್ನು ಸಾಧಿಸಿದೆ. ಕಳೆದ 2 ಪಂದ್ಯಗಳಲ್ಲಿ ಸೋಲು ಕಂಡಿರುವ ಪಂಜಾಬ್ ಇಂದಿನ ಪಂದ್ಯವನ್ನು ಗೆಲ್ಲುವ ಉತ್ಸಾಹದಲ್ಲಿದೆ. 11 ಪಂದ್ಯಗಳನ್ನಾಡಿರುವ ಆರ್.ಸಿ.ಬಿ. 7 ಪಂದ್ಯಗಳನ್ನು ಸೋತು, 4 ಪಂದ್ಯಗಳಲ್ಲಿ ಗೆದ್ದು ಕೇವಲ 8 ಅಂಕ ಪಡೆಡಿದ್ದು ಇಂದು ಪಂದ್ಯವನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಈಗಾಗಲೇ ಸೋಲುಗಳಿಂದ ಕಂಗೆಟ್ಟಿರುವ  ಆರ್.ಸಿ.ಬಿ., ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಜಯಗಳಿಸಿದ ಉದ್ದೇಶವನ್ನು ಹೊಂದಿದೆ. ನಾಕೌಟ್ ಹಾದಿಯಲ್ಲಿ ಉಳಿಯಲು ಆರ್.ಸಿ.ಬಿ ಇಂದಿನ ಪಂದ್ಯವನ್ನು ಕೂಡ ಗೆಲ್ಲಬೇಕಿದೆ. ನಾಕೌಟ್ ಆಸೆ ಭಗ್ನವಾಗಿದ್ದರೂ ಆರ್.ಸಿ.ಬಿ. ಮುಂದಿನ ಎಲ್ಲಾ ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿ, ಉಳಿದ ತಂಡಗಳ ಫಲಿತಾಂಶ ಆಧರಿಸಿ ಪ್ಲೇ ಆಫ್ ಹಂತಕ್ಕೆ ಏರುವ ಸಾಧ್ಯತೆಯೂ ಕೂಡ ಇದೆ. ಆದರೆ, ಅದಕ್ಕಾಗಿ ಉಳಿದ 3 ಪಂದ್ಯಗಳಲ್ಲಿ ಭರ್ಜರಿ ಗೆಲುವನ್ನು ಸಾಧಿಸಲೇ ಬೇಕಾದ ಪರಿಸ್ಥಿತಿ ಇದೆ. ಇದೇ ಸಮಯದಲ್ಲಿ ಆರ್.ಸಿ.ಬಿ. ನಾಯಕನಾದ ವಿರಾಟ್ ಕೊಹ್ಲಿ, ಮುಂದಿನ ಪ್ಲಾನ್ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಗುರಿ ಬೆನ್ನೆತ್ತೇವೆ ಎಂದು ಹೇಳಿದ್ದಾರೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 182 ರನ್ ಗುರಿ ಬೆನ್ನತ್ತಿದ್ದ ಆರ್.ಸಿ.ಬಿ. 19 ಓವರ್ ಗಳಲ್ಲಿ ಜಯಶಾಲಿಯಾಗಿತ್ತು. ಎಲ್ಲಾ ಪಂದ್ಯಗಳನ್ನು ನಾವು ಜಯಿಸಬೇಕಿದೆ. ಇದಕ್ಕಾಗಿ ಗುರಿ ಬೆನ್ನತ್ತುವುದು ಸೂಕ್ತ ಎಂದು ಕೊಹ್ಲಿ ತಿಳಿಸಿದ್ದಾರೆ

 

Edited By

Manjula M

Reported By

Manjula M

Comments