ವಿರಾಟ್ ಕೊಹ್ಲಿ ವಿರುದ್ದ ಅಭಿಮಾನಿಗಳ ಆಕ್ರೋಶ :ಕಾರಣ ಏನ್ ಗೊತ್ತಾ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಗುರುವಾರದಂದು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದು, ನಾಳೆ ಮಧ್ಯಾಹ್ನ ಫೇಸ್ ಬುಕ್ ಮತ್ತು ಇನ್ ಸ್ಟಾ ಗ್ರಾಂನಲ್ಲಿ ಲೈವ್ ನಲ್ಲಿ ಬರುತ್ತೇನೆ. ನೀವು ಕೂಡ ನಮ್ಮ ಜೊತೆಯಾಗಿ ಮುಖ್ಯವಾದ ಮಾಹಿತಿಯನ್ನು ಹಂಚಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
2018 ರ ಐಪಿಎಲ್ ನಲ್ಲಿ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳಪೆ ಪ್ರದರ್ಶನ ನೀಡಿದ್ದು, ಈ ಹಿನ್ನಲೆಯಲ್ಲಿ ಮಹತ್ವವಾದ ನಿರ್ಧಾರವೊಂದನ್ನು ಕೊಹ್ಲಿ ಫೇಸ್ ಬುಕ್ ಲೈವ್ ನ್ಲಲಿ ತಿಳಿಸುತ್ತಾರೆ ಎಂದು ಅಭಿಮಾನಿಗಳು ಭಾವಿಸಿದ್ದರು. ಮತ್ತೆ ಕೆಲವರು ಐಪಿಎಲ್ ನಲ್ಲಿ ಆರ್ ಸಿ ಬಿ ಯ ಕಳಪೆ ಪ್ರದರ್ಶನದ ಕುರಿತು ಅಭಿಮಾನಿಗಳ ಬಳಿ ಕೊಹ್ಲಿ ಕ್ಷಮೆ ಕೇಳುತ್ತಾರೆ ಎಂದು ತಿಳಿದಿದ್ದರು. ಆದರೆ ಹೇಳಿದಂತಯೇ ವಿರಾಟ್ ಕೊಹ್ಲಿ ಇಂದು ಲೈವ್ ಗೆ ಬಂದಿದ್ದು ಅದು ಕಮರ್ಷಿಯಲ್ ಕಾರಣಕ್ಕಾಗಿ, ಪ್ರತಿಷ್ಟಿತ ಶೂ ಕಂಪನಿಯೊಂದರ ರಾಯಭಾರಿಯಾಗಿರುವ ವಿರಾಟ್ ಕೊಹ್ಲಿ ಅದರ ಪ್ರಮೋಷನ್ಗೋಸ್ಕರ ಫೇಸ್ ಬುಕ್ ಲೈವ್ ಮಾಡಿದ್ದು, ಇದರ ಬಗ್ಗೆ ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಕೊಹ್ಲಿ ಗುರಿಯಾಗಿದ್ದಾರೆ.
Comments