RCB ಪಂದ್ಯ ಸೋತ ನಂತರ ಪ್ರಿಯಾಮಣಿ ಮಾಡಿದ ಟ್ವೀಟ್ ಏನು ಗೊತ್ತಾ?

ಈ ಸಲ ಕಪ್ ನಮ್ದೆ ಎಂದು ಬೀಗುತ್ತಿದ್ದ ಬೆಂಗಳೂರು ರಾಯಲ್ ಚಾಲೆಂಜರ್ಸ್ ಕನಸಿನ ನಿರೀಕ್ಷೆ ಹುಸಿಯಾಗಿದೆ. ಆರ್.ಸಿ.ಬಿ ಫ್ಲೇ-ಆಫ್ ಗೆ ಹೋಗುವ ಕನಸು ಬಹುತೇಕ ಭಗ್ನವಾಗಿದೆ.
ಹೈದ್ರಾಬಾದ್ ನಲ್ಲಿ ಸನ್ ರೈಸ್ ತಂಡದ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ನೆನ್ನೆ ಆರ್.ಸಿ.ಬಿ ಸೋಲನ್ನು ಅನುಭವಿಸಿತು..ಇದರಿಂದಾಗಿ ಆರ್.ಸಿ.ಬಿ ಅಭಿಮಾನಿಗಳಿಗೆ ಹೆಚ್ಚು ನಿರಾಸೆಯಾಗಿದೆ. ಬೆಂಗಳೂರು ತಂಡ ಸೋಲುತ್ತಿದ್ದಂತೆ ಬಹುಭಾಷಾ ನಟಿ ಪ್ರಿಯಾಮಣಿ ತಮ್ಮ ಟ್ವೀಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. ರೋಚಕ ಪಂದ್ಯವನ್ನ ವೀಕ್ಷಣೆ ಮಾಡಿದ್ದ ನಟಿ ಪ್ರಿಯಾಮಣಿ ಎರಡು ತಂಡಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ''ಅದ್ಭುತ ಪಂದ್ಯ. ಚಾಂಪಿಯನ್ಸ್ ತಮ್ಮ ತಂಡದ ಮೊತ್ತವನ್ನ ಸಮರ್ಥಿಸಿಕೊಂಡಿದ್ದಾರೆ. ಕೊನೆಯವರೆಗೂ ರೋಚಕವಾಗಿದ್ದ ಪಂದ್ಯದಲ್ಲಿ ಸನ್ ರೈಸ್ ಗೆಲುವು ಸಾಧಿಸಿತು. ಆರ್.ಸಿ.ಬಿ ತಂಡ ಕೂಡ ಉತ್ತಮವಾಗಿ ಆಡಿದೆ'' ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
Comments