ತಂಡಕ್ಕೆ ಆಯ್ಕೆಯಾದ ಮೊದಲ ದಿನದ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು?

ಕ್ರಿಕೆಟ್ ಎಂದರೆ ಸಾಕು ಎಷ್ಟೋ ಅಭಿಮಾನಿಗಳು ಮಾಡೋ ಕೆಲಸ ಬಿಟ್ಟು ಕ್ರಿಕೆಟ್ ನೋಡಲು ಅಭಿಮಾನಿಗಳು ಟಿವಿ ಮುಂದೆ ಕೂರೋದಂತು ಸುಳ್ಳಲ್ಲ. ಅದರಲ್ಲೂ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ ಹಿಡಿದು ಮೈದಾನಕ್ಕಿಳಿದರೆ ಸಾಕು ಹುಚ್ಚೆದು ಕುಣಿಯುವ ಅಭಿಮಾನಿಗಳಿಗೇನು ಕಡಿಮೆ ಇಲ್ಲ.
ಆದರೆ ಟೀಂ ಇಂಡಿಯಾಗೆ ಆಯ್ಕೆಯಾದ ಮೊದಲ ದಿನ ಅವರ ಪರಿಸ್ಥಿತಿ ಹೇಗಿತ್ತು ಎಂದು ಸ್ವತಃ ವಿರಾಟ್ ಕೊಹ್ಲಿ ಅವರೇ ಹೇಳಿಕೊಂಡಿದ್ದಾರೆ. 2008ರಲ್ಲಿ ನಾನು ಅಮ್ಮನ ಜೊತೆ ಟಿವಿ ನೋಡುತ್ತಿದ್ದೆ ಆಗ ನಾನು ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾಗಿ ನನಗೆ ತಿಳಿಯಿತು. ಶ್ರೀಲಂಕಾ ಸರಣಿಗೆ ಆಯ್ಕೆಯಾಗಿದ್ದೇನೆಂದು ನನಗೆ ನಂಬಿಕೆಯೆ ಇರಲಿಲ್ಲ. ಕೊನೆಗೆ ಬಿಸಿಸಿಐ ನಿಂದ ಕಾಲ್ ಬಂದ ಮೇಲೆ ನನಗೆ ನಂಬಿಕೆ ಬಂದಿದ್ದು. ಆಗ ರೋಮಾಂಚಿತನಾಗಿದ್ದೆ ಎಂದು ವಿರಾಟ್ ಕೊಹ್ಲಿ ಇಂದಿಗೂ ನೆನೆಯುತ್ತಾರೆ. ಆ ಸಮಯವನ್ನು ವಿರಾಟ್ ಕೊಹ್ಲಿ ಇನ್ನೂ ಮರೆತಿಲ್ಲ. ಟೀಂ ಇಂಡಿಯಾಗೆ ಆಯ್ಕೆಯಾದ ಸಂತಸದಲ್ಲೇ ಮೊದಲ ದಿನ ತಂಡಕ್ಕೆ ಕಾಲಿಟ್ಟೆ. ತಂಡದಲ್ಲಿದ್ದ ಘಟಾನುಘಟಿ ಆಟಗಾರರು ಇದ್ದಿದ್ದನ್ನು ನೋಡಿ ನನಗೆ ಭಯವಾಯಿತು. ಮೊದಲ ದಿನವೇ ನನ್ನಲ್ಲಿ ಮಾತನಾಡಲು ಹೇಳಿದರು. ಆಗ ನಾನು ತುಂಬಾ ನರ್ವಸ್ ಕೂಡ ಆಗಿದ್ದೆ. ಡ್ರೆಸ್ಸಿಂಗ್ ರೂಂಗೆ ನಾನು ಮೊದಲ ಬಾರಿಗೆ ಕಾಲಿಟ್ಟಾಗ ಖ್ಯಾತ ಆಟಗಾರರು ನನ್ನನ್ನೇ ದಿಟ್ಟಿಸುತ್ತಾ ನೋಡುತ್ತಿದ್ದರು. ಇದನ್ನು ಕಂಡು ನಾನು ಕಂಗಲಾಗಿದ್ದೆ. ಈಗಲೂ ನಾವು ಯುವ ಆಟಗಾರರು ತಂಡಕ್ಕೆ ಬಂದಾಗ ಇದೇ ರೀತಿ ಮಾಡಿ ಸ್ವಲ್ಪ ತಮಾಷೆ ನೋಡುತ್ತೇವೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
Comments