ಆರ್.ಸಿ.ಬಿ. ಫ್ಯಾನ್ಸ್ ಗೆ ಬಿಗ್ ಶಾಕ್: 'ಈ ಸಲ ಕಪ್ ನಮ್ದೆ' ನಾ..?
ನೆನ್ನೆ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್.ಸಿ.ಬಿ.) ಪ್ಲೇ ಆಫ್ ಹಂತಕ್ಕೇರುವ ಕನಸು ಬಹುತೇಕ ಭಗ್ನವಾಗಿದೆ. 'ಈ ಸಲ ಕಪ್ ನಮ್ದೇ' ಎಂದು ಆರ್ ಸಿ ಬಿ ಯನ್ನು ಬೆಂಬಲಿಸಿದ್ದ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿದೆ.
ಪ್ಲೇ ಆಫ್ ತಲುಪುವ ಕನಸು ಬಹುತೇಕ ಭಗ್ನವಾಗಿದ್ದು,ಹೈದರಾಬಾದ್ ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲನ್ನು ಅನುಭವಿಸಿದೆ. ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 146 ರನ್ ಗಳಿಸಿತು. ಶಿಖರ್ ಧವನ್ 13, ಕೇನ್ ವಿಲಿಯಮ್ಸನ್ 56, ಶಕೀಬ್ ಅಲ್ ಹಸನ್ 35, ಯುಸೂಫ್ ಪಠಾಣ್ 12 ರನ್ ಗಳಿಸಿದರು. 147 ರನ್ ಗೆಲುವಿನ ಗುರಿ ಪಡೆದ ಆರ್.ಸಿ.ಬಿ. 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 141 ರನ್ ಗಳಿಸಿ 5 ರನ್ ಅಂತರದ ಸೋಲು ಕಂಡಿದೆ. ಪೃಥ್ವಿ ಪಟೇಲ್ 20, ವಿರಾಟ್ ಕೊಹ್ಲಿ 39, ಮನ್ ದೀಪ್ ಸಿಂಗ್ ಅಜೇಯ 21, ಕಾಲಿನ್ ಡಿ ಗ್ರಾಂಡ್ ಹೋಮ್ 33 ರನ್ ಗಳಿಸಿದರು. ಈ ಸಲ ಎಲ್ಲೆಡೆ ಕಪ್ ನಮ್ದೆ ಅನ್ನುತ್ತಿದ್ದವರು ಸುಮ್ಮನೆ ಆಗೋ ತರ ಆಗಿದೆ. ಮುಂಬರುವ ಮ್ಯಾಚ್ ಗಳಲ್ಲಿ ಆರ್ ಸಿ ಬಿ ಗೆಲುವಿನ ಮೆಟ್ಟಿಲನ್ನು ಏರುತ್ತದೋ ಇಲ್ಲವೋ ಅನ್ನುವುದನ್ನು ಕಾದು ನೋಡಬೇಕಿದೆ.
Comments