ಸನ್ ರೈಸರ್ಸ್ ಗೆ ಮುಖಾಮುಖಿಯಾಗಲಿರುವ ಕೊಹ್ಲಿ ಬಾಯ್ಸ್
ಐ ಪಿ ಎಲ್ ಫೀವರ್ ಈಗ ಎಲ್ಲ ಕಡೆಗಳಲ್ಲೂ ಕೂಡ ಶುರುವಾಗಿದೆ. ಆದರೆ ಈ ಸಲ ಕಪ್ ನಮ್ದೆ ಎನ್ನುತ್ತಿದ್ದವರಿಗೆ ಆರ್ ಸಿ ಬಿ ನಿರಾಸೆಯನ್ನುಂಡು ಆಡುತ್ತಿದೆ.ಈಗಾಗಲೆ ಆಡಿರುವ 9 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಸೋತಿರುವ ಆರ್.ಸಿ.ಬಿ. ಗೆ ಪ್ಲೇ ಆಫ್ ಹಂತಕ್ಕೇರಲು ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.
ಈಗಾಗಲೇ ಪ್ಲೇ ಆಫ್ ಹಾದಿ ಕಠಿಣವಾಗಿರುವುದರಿಂದ ಆರ್.ಸಿ.ಬಿ. ಒತ್ತಡಕ್ಕೆ ಒಳಗಾಗಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಆರ್ ಸಿ ಬಿ ಇಂದು ಎದುರಿಸಲಿದೆ. ಹೈದರಾಬಾದ್ ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಐ.ಪಿ.ಎಲ್. ಪಂದ್ಯದಲ್ಲಿ ಕೊಹ್ಲಿ ಬಳಗ ಹಾಗೂ ಕೇನ್ ವಿಲಿಯಮ್ಸನ್ ಬಳಗ ಮುಖಾಮುಖಿಯಾಗಲಿವೆ. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಉತ್ತಮ ಆಟಗಾರರಿದ್ದರೂ, ಆರ್.ಸಿ.ಬಿ.ಗೆ. ಗೆಲುವು ಮಾತ್ರ ಸಿಕ್ಕಿಲ್ಲ. ಫೀಲ್ಡಿಂಗ್ ನಲ್ಲಿಯೂ ಮತ್ತು ಬ್ಯಾಟಿಂಗ್ ನಲ್ಲೂ ಆರ್ ಸಿ ಬಿ ತಂಡ ವಿಫಲವಾಗುತ್ತಿದೆ. ಇನ್ನು ಸತತವಾಗಿ 4 ಪಂದ್ಯಗಳನ್ನು ಜಯಿಸಿರುವ ಸನ್ ರೈಸರ್ಸ್ ಹೈದರಾಬಾದ್ ಎಂತಹುದೇ ತಂಡವನ್ನು ಮಣಿಸುವ ಉತ್ಸಾಹದಲ್ಲಿದೆ. ಈಗಾಗಲೇ ಆಡಿದ 9 ಪಂದ್ಯಗಳಲ್ಲಿ ಹೈದರಾಬಾದ್ ತಂಡ 7 ಪಂದ್ಯಗಳಲ್ಲಿ ಗೆಲುವು ಕಂಡಿದೆ. ಇಂದು ಆರ್ ಸಿ ಬಿ ಗೆಲುವಿನ ನಗೆಯನ್ನು ಬೀರುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
Comments