ಆರ್ ಸಿಬಿ ಮತ್ತು ಸಿಎಸ್ ಕೆ ಮತ್ತೊಮ್ಮೆ ಮುಖಾಮುಖಿ
ಈಗಾಗಲೇ ಐಪಿಎಲ್ ಶುರುವಾಗಿದ್ದು ಸಾಕಷ್ಟು ಪಂದ್ಯಗಳು ನಡೆದಿವೆ. ಕೆಲವು ತಂಡಗಳು ಗೆದ್ದು ನಗೆ ಬೀರುತ್ತಿದ್ದರೆ ಮತ್ತಷ್ಟು ತಂಡಗಳು ಗೆಲುವಿನ ದಾರಿಯನ್ನು ಹುಡುಕುತ್ತಿವೆ.
ಐಪಿಎಲ್'ನ ಬದ್ಧವೈರಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಈಗ ಮತ್ತೊಮ್ಮೆ 2ನೇ ಬಾರಿಗೆ ಮುಖಾಮುಖಿಯಾಗುತ್ತಿವೆ ನಿರಾಯಾಸವಾಗಿ ಅಗ್ರಸ್ಥಾನದಲ್ಲಿ ಕುಳಿತಿದ್ದ ಚೆನ್ನೈ, ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸೋಲು ಕಂಡಿದ್ದರಿಂದ 2ನೇ ಸ್ಥಾನಕ್ಕೆ ಬಂದಿದೆ. ಆರ್'ಸಿಬಿಯನ್ನು ಹಣಿದು ಮತ್ತೆ ಅಗ್ರಸ್ಥಾನಕ್ಕೆ ಹೋಗುವುದು ಎಂ.ಎಸ್.ಧೋನಿ ತಂಡದ ಮುಂದಿರುವ ಸವಾಲಾಗಿದೆ. 8 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದು, 5ರಲ್ಲಿ ಸೋತಿರುವ ಆರ್'ಸಿಬಿ, ಗೆಲ್ಲಲೇ ಬೇಕು ಎನ್ನುವ ಪರಿಸ್ಥಿತಿ ಎದುರಾಗಿದೆ.
Comments