ಧೋನಿ ಪಾದ ಮುಟ್ಟಿದ ಕ್ರಿಕೆಟ್ ಅಭಿಮಾನಿ

ಐಪಿಎಲ್ ನಲ್ಲಿ ಹೆಚ್ಚಿನ ಪ್ರಮಾಣದ ಅಭಿಮಾನಿಗಳನ್ನು ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾದ ಎಂಎಸ್ ಧೋನಿಯವರ ಕಾಲನ್ನು ಕ್ರಿಕೆಟ್ ಅಭಿಮಾನಿಯೊಬ್ಬ ಮುಟ್ಟಿದ್ದಾರೆ.
ಈಡನ್‌ಗಾರ್ಡನ್ಸ್‌ನಲ್ಲಿ ಗುರುವಾರ ರಾತ್ರಿ ನಡೆದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯದ ವೇಳೆ ಧೋನಿ ಸಹ ಆಟಗಾರರೊಂದಿಗೆ ಡಗ್‌ಔಟ್ ಪ್ರದೇಶದಲ್ಲ್ಲಿ ಚರ್ಚಿಸುತ್ತಿದ್ದ ವೇಳೆ ಧೋನಿ ಬಳಿ ಬಂದ ಬಾಲಕನೊಬ್ಬ ಧೋನಿಯ ಕಾಲನ್ನು ಸ್ಪರ್ಶಿಸಿದ್ದಾನೆ. ಬಾಲಕನೊಬ್ಬ ಧೋನಿಯ ಬಳಿ ಓಡಿ ಬಂದು ಅವರ ಕಾಲನ್ನು ಮುಟ್ಟಿದ ವಿಡಿಯೋವನ್ನು ಐಪಿಎಲ್‌ನ ಅಧಿಕೃತ ಟ್ವಿಟರ್ ಪೇಜ್‌ನಲ್ಲಿ ಹಾಕಲಾಗಿದೆ. ಈ ವರ್ಷದ ಐಪಿಎಲ್‌ನಲ್ಲಿ ಧೋನಿಯೊಂದಿಗೆ ಕ್ರಿಕೆಟ್ ಅಭಿಮಾನಿಗಳು ಈ ರೀತಿ ವರ್ತಿಸುವುದು ಇದು ಎರಡನೇ ಬಾರಿ. ಎರಡು ವಾರಗಳ ಹಿಂದೆ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ಮೈದಾನದೊಳಗೆ ಓಡಿ ಬಂದ ಅಭಿಮಾನಿಯೊಬ್ಬ ಧೋನಿಯ ಕಾಲನ್ನು ಮುಟ್ಟಿದ್ದರು.
Comments