ಅನುಷ್ಕಾ ಹುಟ್ಟಿದ್ದ ಹಬ್ಬದ ದಿನದಂದು ಗೆಲುವಿನ ನಗೆ ಬೀರಿದ ಕೊಹ್ಲಿ ಬಾಯ್ಸ್

ನೆನ್ನೆ ಬೆಂಗಳೂರಿನಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಆರ್.ಸಿ.ಬಿ. 14 ರನ್ ಗಳಿಂದ ಸೋಲಿಸಿದೆ. ಅನುಷ್ಕಾ ಶರ್ಮಾ ಹುಟ್ಟಿದ ಹಬ್ಬದ ದಿನದಂದು ವಿರಾಟ್ ಕೊಹ್ಲಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಜಯವನ್ನು ಸಾಧಿಸಿದೆ.
ನೆನ್ನೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಆರ್.ಸಿ.ಬಿ. 14 ರನ್ ಗಳಿಂದ ಮಣಿಸಿದೆ.ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಆರ್.ಸಿ.ಬಿ. ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತ್ತು.. ಮನನ್ ವೊಹ್ರಾ 45, ಕ್ವಿಂಟನ್ ಡಿ'ಕಾಕ್ 7, ಬ್ರೆಂಡನ್ ಮೆಕಲ್ 37, ವಿರಾಟ್ ಕೊಹ್ಲಿ 32, ಮನ್ ದೀಪ್ ಸಿಂಗ್ 14, ಕಾಲಿನ್ ಡಿ'ಗ್ರ್ಯಾಂಡ್ ಹೋಮ್ ಅಜೇಯ 23 ರನ್ ಗಳಿಸಿದರು. 168 ರನ್ ಗೆಲುವಿನ ಗುರಿ ಪಡೆದ ಮುಂಬೈ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 153 ರನ್ ಗಳಿಸಿತು. ಜೀನ್ ಪಾಲ್ ಡುಮಿನಿ 23, ಹಾರ್ದಿಕ್ ಪಾಂಡ್ಯ 50, ಕೃಣಾಲ್ ಪಾಂಡ್ತ 28, ಬೆನ್ ಕಟಿಂಗ್ ಅಜೇಯ 12 ರನ್ ಗಳಿಸಿದರು. ಬಹಳಷ್ಟು ಸೋಲಿನ ನಂತರ ಗೆಲುವಿನ ನಗೆ ಬೀರಿರುವ ಆರ್ ಸಿ ಬಿ ಮುಂದಿನ ಮ್ಯಾಚ್ ಗಳನ್ನು ಗೆಲ್ಲಲ್ಲಿ ಅನ್ನೋದು ಅಭಿಮಾನಿಗಳ ಆಸೆ.
Comments