ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಕೊಹ್ಲಿ ಹೆಸರು ಶಿಫಾರಸ್ಸು

ಕ್ರೀಡೆಯಲ್ಲಿ ಅತ್ಯುನ್ನತ ಪ್ರದರ್ಶನ ನೀಡುವಂತಹ ಕ್ರೀಡಾಪಟುಗಳಿಗೆ ನೀಡಲಾಗುವ, ಭಾರತದ ಪ್ರತಿಷ್ಠಿತ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಕ್ರಿಕೆಟಿಗ ಕೊಹ್ಲಿ ಹೆಸರನ್ನು ಬಿಸಿಸಿಐ ಈಗಾಗಲೇ ಶಿಫಾರಸು ಮಾಡಿದೆ.
ಖೇಲ್ ರತ್ನ ದೊರೆತರೆ ಈ ಪ್ರಶಸ್ತಿ ಪಡೆದುಕೊಂಡ ಮೂರನೇ ಕ್ರಿಕೆಟ್ ಆಟಗಾರರಾಗುತ್ತಾರೆ ಕೊಹ್ಲಿ. ಈ ಮೊದಲು 1997ರಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ 2007ರಲ್ಲಿ ಎಂಎಸ್ ಧೋನಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಲ್ಲದೇ ಅಂಡರ್ 19 ವರ್ಲ್ಡ್ ಕಪ್ ಗೆಲ್ಲುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೋಚ್ ರಾಹುಲ್ ದ್ರಾವಿಡ್ ರನ್ನು ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ಜೊತೆಗೆ, ಸುನೀಲ್ ಗವಾಸ್ಕರ್ ಅವರನ್ನು ಧ್ಯಾನ್ ಚಂದ್ ಪ್ರಶಸ್ತಿಗೆ ಹಾಗೂ ಸ್ಮೃತಿ ಮಂದಾನ ಹಾಗೂ ಶಿಖರ್ ಧವನ್ ರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ.
Comments