ಧೋನಿ, ರಾಯುಡು ಅಬ್ಬರದ ಆಟಕ್ಕೆ ನಡುಗಿದ ಆರ್ ಸಿಬಿ
ಧೋನಿ ಹಾಗೂ ರಾಯುಡು ಅವರ ಬ್ಯಾಟಿಂಗ್ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಐದು ವಿಕೆಟುಗಳ ಭರ್ಜರಿ ಗೆಲುವನ್ನು ಸಾಧಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್ಗಳಿಸುವುದರ ಮೂಲಕ ಸಿಎಸ್ ಕೆ ಗೆಲುವಿಗೆ 206 ರನ್ಗಳ ಬೃಹತ್ ಗುರಿಯನ್ನು ನೀಡಿತು. ಬೃಹತ್ ಮೊತ್ತ ಬೆನ್ನತ್ತಿದೆ ಸಿಎಸ್ ಕೆ ಆರಂಭದಲ್ಲೇ ಶೇನ್ ವಾಟ್ಸನ್ (7) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ ಬಳಿಕ ಬಂದ ಅಂಬಾಟಿ ರಾಯುಡು(82) ಹಾಗೂ ಮಹೇಂದ್ರ ಸಿಂಗ್ ಧೋನಿ(70*) ಅವರ ಆಕರ್ಷಕ ಅರ್ಧ ಶತಕಗಳ ನೆರವಿನೊಂದಿಗೆ ಇನ್ನು 2 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ಗುರಿಯನ್ನು ಮುಟ್ಟಿತ್ತು.
Comments