ಐಪಿಎಲ್ ನಲ್ಲಿ ಕೊಹ್ಲಿ / ದೋನಿಯ ಬಿಗ್ ಫೈಟ್
ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐ.ಪಿ.ಎಲ್. ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಎಂ.ಎಸ್. ಧೋನಿ ನೇತೃತ್ವದ ತಂಡಗಳು ನೇರವಾಗಿ ಮುಖಾಮುಖಿಯಾಗಲಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಹಣಾಹಣಿಗೆ ವೇದಿಕೆ ಈಗಾಗಲೆ ಸಜ್ಜಾಗಿದ್ದು, ಗೆಲುವಿಗೆ ಉಭಯ ತಂಡಗಳು ಕಾರ್ಯತಂತ್ರವನ್ನು ರೂಪಿಸಿಕೊಂಡಿವೆ. ಆರ್.ಸಿ.ಬಿ.ಪರವಾಗಿ ವಿರಾಟ್ ಕೊಹ್ಲಿ, ಎಬಿ ಡಿ'ವಿಲಿಯರ್ಸ್, ಯಜುವೇಂದ್ರ ಚಾಹಲ್ ಭರ್ಜರಿ ಪ್ರದರ್ಶನ ನೀಡುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಚೆನ್ನೈ ತಂಡಕ್ಕೆ ಧೋನಿ, ಸುರೇಶ್ ರೈನಾ, ಶೇನ್ ವಾಟ್ಸನ್ ಬಲ ತುಂಬಿದ್ದು, ಇಂದಿನ ಪಂದ್ಯದಲ್ಲಿಯೂ ಮಿಂಚುವ ನಿರೀಕ್ಷೆಯೂ ಕೂಡ ಇದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್.ಸಿ.ಬಿ. ಮತ್ತು ಚೆನ್ನೈ ತಂಡಗಳ ನಡುವೆ 7 ಪಂದ್ಯ ನಡೆದಿದ್ದು, ಉಭಯ ತಂಡಗಳು ತಲಾ 3 ಪಂದ್ಯಗಳಲ್ಲಿ ಜಯವನ್ನು ಸಾಧಿಸಿವೆ.. 1 ಪಂದ್ಯದ ಫಲಿತಾಂಶ ಬಂದಿಲ್ಲ. ಇಂದು ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹೆಚ್ಚಾಗಲಿದೆ.
Comments