ಮುಂಬೈ ಇಂಡಿಯನ್ಸ್ ವಿರುದ್ದ ಮುಗ್ಗರಿಸಿದ ಆರ್.ಸಿ.ಬಿ

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನೆನ್ನೆ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 46 ರನ್ ಗಳಿಂದ ಸೋಲನ್ನು ಕಂಡಿದೆ.
ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಅಜೇಯ 92 ರನ್ ಗಳಿಸಿದ್ರೂ ಕೂಡ ಉಳಿದ ಆಟಗಾರರು ಸಾಥ್ ಕೊಡಲಿಲ್ಲ. ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಗೆ ಇಳಿದ ಮುಂಬೈ ತಂಡ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 213 ರನ್ ಗಳನ್ನು ಕಲೆ ಹಾಕಿತು. ಎವಿನ್ ಲೂಯಿಸ್ 65, ರೋಹಿತ್ ಶರ್ಮಾ 94 ರನ್ ಗಳಿಸಿದರು. ಆರ್.ಸಿ.ಬಿ. ಪರ ಉಮೇಶ್ ಯಾದವ್ 2 ವಿಕೆಟ್ ಅನ್ನು ಪಡೆದರು. 214 ರನ್ ಗೆಲುವಿನ ಗುರಿ ಪಡೆದ ಆರ್.ಸಿ.ಬಿ. 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ ಕಲೆ ಹಾಕಿತು. ವಿರಾಟ್ ಕೊಹ್ಲಿ ಅಜೇಯ 92, ಕ್ಲಿಂಟಾನ್ ಡಿ'ಕಾಕ್ 19, ಮನ್ ದೀಪ್ ರಾಯ್ 16 ರನ್ ಗಳನ್ನು ಗಳಿಸಿದರು. ಮುಂಬೈ ಪರ ಕೃಣಾಲ್ ಪಾಂಡ್ಯ 3, ಜಸ್ ಪ್ರೀತ್ ಬೂಮ್ರಾ 2, ಮಿಚೆಲ್ ಮೆಕ್ಲೆಗನ್ 2 ವಿಕೆಟ್ ಈ ಪಂದ್ಯದಲ್ಲಿ ಪಡೆದರು.
Comments