ಐಪಿಎಲ್ ನ ಗರಿಷ್ಠ ರನ್ ಸರದಾರ ವಿರಾಟ್ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿ ಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಗರಿಷ್ಠ ರನ್ ಸರದಾರರಾಗಿ ದಾಖಲೆಯನ್ನು ನಿರ್ಮಿಸಿದ್ದಾರೆ.
ಈ ಮೊದಲು ಈ ದಾಖಲೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಸುರೇಶ್ ರೈನಾ ಅವರ ಹೆಸರಲ್ಲಿತ್ತು. ಆರ್ಸಿಬಿ ಮತ್ತು ಮುಂಬೈ ನಡುವಿನ ಪಂದ್ಯದ ವೇಳೆ ಕೊಹ್ಲಿ ಈ ದಾಖಲೆಯನ್ನು ನಿರ್ಮಿಸಿ ಸುರೇಶ್ ರೈನಾ ಅವರನ್ನು ಹಿಂದಿಕ್ಕಿದ್ದಾರೆ. ಸುರೇಶ್ ರೈನಾ 163 ಪಂದ್ಯಗಳಿಂದ 4558 ರನ್ ದಾಖಲಿಸಿದ್ದಾರೆ. ವಿರಾಟ್ ಕೊಹ್ಲಿ 153 ಪಂದ್ಯಗಳಿಂದ 4619 ರನ್ ದಾಖಲಿಸಿದರು. ಉಳಿದಂತೆ ರೋಹಿತ್ ಶರ್ಮಾ 163 ಪಂದ್ಯಗಳಿಂದ 4345 ರನ್ ಬಾರಿಸಿ ಗರಿಷ್ಠ ರನ್ ಬಾರಿಸಿದವರಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
Comments