ಚೆನ್ನೈ ಸೂಪರ್ ಕಿಂಗ್ಸ್ ಬಿಗ್ ಶಾಕ್, ವೇಗದ ಬೌಲರ್ ತವರಿಗೆ ವಾಪಸ್..!

ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ಅನಿಸಿಕೊಂಡಿದ್ದ ಲುಂಗಿ ನಿಗಿಡಿ ಐಪಿಎಲ್ ಬಿಟ್ಟು ತವರಿಗೆ ಮರಳಿದ್ದಾರೆ. ತಂದೆಯ ಹಠಾತ್ ನಿಧನದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣವನ್ನು ಬೆಳೆಸಿದ್ದಾರೆ. ಲುಂಗಿ ನಿಗಿಡಿ ತಂದೆ ಜೆರೋಮ್ ಗೆ ಇತ್ತೀಚೆಗಷ್ಟೆ ಬೆನ್ನಿನ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿತ್ತು.
ಆಪರೇಷನ್ ಬಳಿಕ ಜೆರೋಮ್ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ನಿನ್ನೆ ಅವರು ನಿಧನರಾಗಿದ್ದಾರೆ. ಲುಂಗಿ ತಂದೆಯ ನಿಧನದ ಸುದ್ದಿಯನ್ನು ಕುಟುಂಬಸ್ಥರು ಖಚಿತಪಡಿಸಿದ ಹಿನ್ನೆಲೆಯಲ್ಲಿ, ನಿಗಡಿ ಅವರು ಡರ್ಬನ್ ಗೆ ಪ್ರಯಾಣವನ್ನು ಬೆಳೆಸಿದ್ರು.ಲುಂಗಿ ನಿಗಿಡಿ ಉದಯೋನ್ಮುಖ ಆಟಗಾರ. ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗಳು 50 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದರು. ಆದರೆ ಈಗ ಐಪಿಎಲ್ ಪಂದ್ಯಗಳಿಗೆ ಲುಂಗಿ ನಿಗಿಡಿ ಅಲಭ್ಯರಾಗಿದ್ದಾರೆ. ಇತ್ತೀಚೆಗೆ ನಡೆದ ಸರಣಿಯಲ್ಲಿ ಲುಂಗಿ, ಭಾರತದ ವಿರುದ್ಧ 6 ವಿಕೆಟ್ ಪಡೆದಿದ್ದರು.
Comments