ಪಂಜಾಬ್ ವಿರುದ್ದ ಆರ್ ಸಿ ಬಿ ಗೆ ಮೊದಲ ಗೆಲುವು
ನೆನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಅಮೋಘ ಆಟದ ನೆರವಿನೊಡನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 4 ವಿಕೆಟ್ ಜಯ ಸಾಧಿಸಿದೆ. ಈ ಜಯದೊಂದಿಗೆ ಆರ್ ಸಿ ಬಿ ತನ್ನ ಖಾತೆಯನ್ನು ತೆರೆದಿದೆ.
ಮೊದಲಿಗೆ ಬ್ಯಾಟಿಂಗ್ ಗೆ ಇಳಿದಿದ್ದ ಪಂಜಾಬ್ ಪಡೆ 19.2 ಓವರ್ ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತ್ತು. ಪಂಜಾಬ್ ಪರವಾಗಿ ರ ಕೆ. ಎಲ್ ರಾಹುಲ್(47), ರವಿಚಂದ್ರನ್ ಅಶ್ವಿನ್(33) ಹಾಗೂ ಕರುಣ್ ನಾಯರ್(29) ಉತ್ತಮ ರನ್ ಕಲೆ ಹಾಕಿದ್ದರು.ಬೆಂಗಳೂರು ತಂಡದ ಪರವಾಗಿ ಉಮೇಶ್ ಯಾದವ್ 3 ವಿಕೆಟ್ ಕಬಳಿಸಿ ಎಲ್ಲರ ಗಮನ ಸೆಳೆದಿದ್ದರು. ಕ್ರಿಸ್ ವೋಕ್ಸ್, ಕುಲ್ವಂತ್ ಖೇಜ್ರೋಲಿಯ ಮತ್ತು ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್, ಯಜುವೇಂದ್ರ ಚಹಾಲ್ 1 ವಿಕೆಟ್ ಪಡೆದರು.ಗೆಲುವಿಗೆ 156 ರನ್ ಗುರಿ ಪಡೆದ ಆರ್ಸಿಬಿ 19. 3 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಗಳಿಸುವುದರೊಡನೆ ಗೆಲುವನ್ನು ಸಾಧಿಸಿದೆ. ಬೆಂಗಳೂರು ಪರವಾಗಿ ಎಬಿ ಡಿವಿಲಿಯರ್ಸ್(57), ಕ್ವಿಂಟನ್ ಡಿ ಕಾಕ್(45), ವಿರಾಟ್ ಕೊಹ್ಲಿ(21) ಮಂದೀಪ್ ಸಿಂಗ್(22) ರನ್ ಗಳಿಸಿ ಶ್ರೇಷ್ಠ ಪ್ರದರ್ಶನ ನೀಡಿ ಆರ್ ಸಿ ಬಿ ಅಭಿಮಾನಿಗಳಿಗೆ ಖುಷಿ ಕೊಟ್ಟರು..ಬೆಂಗಳೂರಿನ ಪಾಲಿಗೆ ಇದು ಈ ಸರಣಿಯ ಮೊದಲ ಗೆಲುವಾಗಿದ್ದಿ ಈ ಸಲ ಕಪ್ ನಮ್ದೆ ಎನ್ನುತ್ತಿದ್ದವರಿಗೆ ಗೆಲುವಿನ ರೆಕ್ಕೆಯನ್ನು ಮೂಡಿಸಿದ್ದಾರೆ.
Comments