ತವರೂರಲ್ಲಿ ತಾರಕಕ್ಕೇರುತ್ತ CSK ಗೆಲುವು!!
ಐಪಿಎಲ್ 11ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ) ಹಾಗೂ ಕೋಲ್ಕತಾ ನೈಟ್‌ರೈಡರ್ಸ್ ತಂಡಗಳು ಇಂದು ಮುಖಾಮುಖಿಯಾಗಲಿವೆ. ಇಲ್ಲಿನ ಚೇಪಾಕ್ ಕ್ರೀಡಾಂಗಣದಲ್ಲಿ 2 ವರ್ಷಗಳ ಬಳಿಕ ಕಣಕ್ಕಿಳಿಯಲಿರುವ ಚೆನ್ನೈ, ಜಯದ ಓಟ ಮುಂದುವರಿಸಲು ಕಾತರಿಸುತ್ತಿದೆ.
ಸಿಎಸ್ ಕೆ ಅಭ್ಯಾಸ ಪಂದ್ಯಕ್ಕೇ 10 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು, ಧೋನಿ ಹಾಗೂ ತಂಡವನ್ನು ಸ್ವಾಗತಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಪಂದ್ಯದ ಟಿಕೆಟ್'ಗಳು ಸೋಲ್ಡ್'ಔಟ್ ಆಗಿದ್ದು, ತಂಡದ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ. ಹಿರಿಯ ಆಟಗಾರರನ್ನೇ ಹೆಚ್ಚಾಗಿ ಹೊಂದಿರುವ ಚೆನ್ನೈ ತಂಡದಲ್ಲಿ ಅನುಭವಕ್ಕೆ ಕೊರತೆಯಿಲ್ಲ. ಅನುಭವ ಎಷ್ಟು ಮುಖ್ಯ ಎನ್ನುವುದನ್ನು ಚೆನ್ನೈ ಮೊದಲ ಪಂದ್ಯದಲ್ಲೇ ತೋರಿಸಿದೆ. ಮತ್ತೊಂದೆಡೆ ಕೆಕೆಆರ್ ತಂಡವನ್ನು ಮುನ್ನಡೆಸಲಿರುವ ದಿನೇಶ್ ಕಾರ್ತಿಕ್'ಗೂ ಸಹ ಇದು ತವರು ಕ್ರೀಡಾಂಗಣವಾಗಿದೆ. ದೇಸಿ ಕ್ರಿಕೆಟ್‌ನಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸುವ ಕಾರ್ತಿಕ್, ತವರಿನಲ್ಲಿ ಮಿಂಚಿ ಸಿಎಸ್'ಕೆಗೆ ಆಘಾತ ನೀಡಲು ಕಾಯುತ್ತಿದ್ದಾರೆ.
Comments