Report Abuse
Are you sure you want to report this news ? Please tell us why ?
ಮಹಿಳೆಯರ ಶೂಟಿಂಗ್ ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡ ಹೀನಾ ಸಿಧು

10 Apr 2018 2:34 PM | Sports
425
Report
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ನ ಮಹಿಳೆಯರ 25 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಹೀನಾ ಸಿಧು ಚಿನ್ನದ ಪದಕವನ್ನು ಗೆದ್ದು ಸಂಭ್ರಮಿಸುತ್ತಿದ್ದಾರೆ.
ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಇದು ಅವರಿಗೆ ಒಲಿದ ಎರಡನೆ ಪದಕವಾಗಿದೆ. 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾನುವಾರ ಬೆಳ್ಳಿ ಪದಕ ಜಯಿಸಿದ್ದರು.38 ಅಂಕ ಪಡೆದ ಹೀನಾ ಸಿಧು ಮೊದಲ ಸ್ಥಾನ ಗಳಿಸಿದ್ದು ಅವರಿಗೆ ಪೈಪೋಟಿ ನೀಡಿದ ಆಸ್ಟ್ರೇಲಿಯಾದ ಎಲೆನಾ ಗಲಿಯಾಬೊವಿಚ್ 35 ಅಂಕಗಳೊಂದಿಗೆ ಬೆಳ್ಳಿ ಪದಕಕ್ಕೆ ತೃಪ್ತಿ ಪಡೆದುಕೊಂಡರು. ಮಲೇಷ್ಯಾದ ಅಲಿಯಾ ಸಾಜನಾ ಅಜಹರಿ ಕಂಚಿನ ಪದಕವನ್ನು ಜಯಿಸಿದ್ದಾರೆ.

Edited By
Manjula M

Comments