ಆರ್ ಸಿಬಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಕೊಹ್ಲಿ ಪಡೆ
ನೆನ್ನೆ ನಡೆದ ರೋಚಕ ಪಂದ್ಯದಲ್ಲಿ ಕೆ ಕೆ ಆರ್ ತಂಡಕ್ಕೆ ಗೆಲುವಿನ ನಗೆ ಬೀರಲು ಎಡೆ ಮಾಡಿಕೊಟ್ಟ ಆರ್ ಸಿಬಿ. ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 4 ವಿಕೆಟ್ ಅಂತರದಿಂದ ಜಯಗಳಿಸಿದೆ. ಆರ್.ಸಿ.ಬಿ. ನೀಡಿದ 177 ರನ್ ಗೆಲುವಿನ ಗುರಿ ಪಡೆದ ಕೆ.ಕೆ.ಆರ್. 18.5 ಓವರ್ ಗಳಲ್ಲಿ ಗುರಿ ತಲುಪುವ ಮೂಲಕ ಜಯ ಗಳಿಸಿದೆ.
ಸುನಿಲ್ ನರೈನ್(17 ಎಸೆತದಲ್ಲಿ 50 ರನ್) ಅಮೋಘ ಪ್ರದರ್ಶನ ನೀಡಿ ಆರ್.ಸಿ.ಬಿ. ಗೆಲುವನ್ನು ಕಸಿದುಕೊಂಡಿದ್ದಾರೆ. ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ಪಡೆ ಆರಂಭಿಕ ಆಘಾತ ಅನುಭವಿಸಿತು. ಬ್ರೆಂಡನ್ ಮೆಕಲಮ್ 43, ಎಬಿ ಡಿ'ವಿಲಿಯರ್ಸ್ 44, ವಿರಾಟ್ ಕೊಹ್ಲಿ 31, ಮನ್ ದೀಪ್ ಸಿಂಗ್ 37 ರನ್ ಗಳಿಸಿದರು. 20 ಓವರ್ ಗಳಲ್ಲಿ 176 ರನ್ ಗಳಿಸಿದ ಆರ್.ಸಿ.ಬಿ. 177 ರನ್ ಗುರಿ ನೀಡಿತು. ಕೋಲ್ಕತ್ತಾ ಪರ ನರೈನ್ 50, ದಿನೇಶ್ ಕಾರ್ತಿಕ್ 35, ನಿತೀಶ್ ರಾಣಾ 34 ರನ್ ಗಳಿಸಿ ತಂಡದ ಗೆಲುವಿನಲ್ಲಿ ಭಾಗಿಯಾದರು. ಏಪ್ರಿಲ್ 13 ರಂದು ಬೆಂಗಳೂರಿನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಆರ್.ಸಿ.ಬಿ. ಮುಂದಿನ ಪಂದ್ಯ ನಡೆಯಲಿದೆ.
Comments