ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನಕ್ಕೆ ಗುರಿಯಿಟ್ಟ ಚಾನು

ಮೊದಲ ದಿನವೇ ಭಾರತ ಚಿನ್ನ ಪದಕಕ್ಕೆ ಮುತ್ತಿಕ್ಕಿದೆ. ವೇಯ್ಟ್ ಲಿಫ್ಟಿಂಗ್ ನ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಮೀರಾಭಾಯಿ ಚಾನೂ ಬಂಗಾರ ಗೆದ್ದಿದ್ದಾರೆ. ವೇಯ್ಟ್ ಲಿಫ್ಟಿಂಗ್ನ ಮಹಿಳೆಯರ 48 ಕೆಜಿ ವಿಭಾಗದಲ್ಲಿ 189 ಕೆಜಿ ಎತ್ತಿರುವ ಮೂಲಕ ಚಾನೂ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಮೂರು ವಿಭಾಗದಲ್ಲೂ ಯಾವುದೇ ತಪ್ಪೆಸಗದೇ ಉತ್ತಮ ಪ್ರದರ್ಶನ ನೀಡಿ, ಕಾಮನ್ವೆಲ್ತ್ ಗೇಮ್ನಲ್ಲಿ ದಾಖಲೆ ಬರೆದಿದ್ದಾರೆ. ಇನ್ನು, ಇದಕ್ಕೂ ಮುನ್ನ ವೇಯ್ಟ್ ಲಿಫ್ಟಿಂಗ್ನಲ್ಲೇ ಕನ್ನಡಿಗ ಗುರುರಾಜ್ 56 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ಈ ಮೂಲಕ ಕ್ರೀಡಾಕೂಟದ ಮೊದಲ ದಿನ ಭಾರತಕ್ಕೆ ಒಟ್ಟು ಎರಡು ಪದಕಗಳು ಬಂದಿವೆ
Comments