ಟಿ20 ತ್ರಿಕೋನ ಸರಣಿ : ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಜಯ

ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ವನಿತೆಯರ ತಂಡ ಭಾರತದ ಸ್ಪಿನ್ನರ್ ಗಳ ದಾಳಿಗೆ ತತ್ತರಿಸಿ 18.5 ಓವರ್ ನಲ್ಲಿ 107 ರನ್ ಗಳಿಗೆ ಆಲೌಟ್ ಆದರು.
ಇಂಗ್ಲೆಂಡ್ ಪರ ಆರಂಭಿಕ ಆಟಗಾರ್ತಿ ಡೇನಿಯಲ್ಲೇ ವ್ಯಾಟ್ ಗಳಿಸಿದ 31 ರನ್ ಗಳ ಗರಿಷ್ಟ ವೈಯುಕ್ತಿಕ ರನ್ ಗಳಿಕೆಯಾಗಿತ್ತು. ಭಾರತದ ಪರ ಅನುಜಾ ಪಾಟಿಲ್ 3 ವಿಕೆಟ್ ಕಬಳಿಸಿ ಯಶಸ್ವೀ ಬೌಲರ್ ಎನಿಸಿಕೊಂಡರೆ, ರಾಧಾ ಯಾದವ್, ದೀಪ್ತಿ ಶರ್ಮಾ ಮತ್ತು ಪೂನಂ ಯಾದವ್ ತಲಾ 2 ವಿಕೆಟ್ ಗಳಿಸಿದರು. ಇನ್ನು ಇಂಗ್ಲೆಂಡ್ ನೀಡಿದ 108 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತಕ್ಕೆ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನಾ ಬೆನ್ನೆಲುಬಾಗಿ ನಿಂತರು. ಇನ್ನಿಂಗ್ಸ್ ನ ಯಾವುದೇ ಹಂತದಲ್ಲೂ ಇಂಗ್ಲೆಂಡ್ ನೀಡಿದ ಗುರಿ ಭಾರತಕ್ಕೆ ಸಾವಾಲಾಗಿ ಪರಿಣಮಿಸಲೇ ಇಲ್ಲ.
ಮಿಥಾಲಿ ರಾಜ್ 6 ರನ್ ಗಳಿಗೆ ನಿರ್ಗಮಿಸಿದರು. ಬಳಿಕ ಬಂದ ರೋಡ್ರಿಗ್ಸ್ ಕೂಡ 7 ರನ್ ಗಳಿಸಿ ಔಟ್ ಆದರು. ಈ ವೇಳೆ ಭಾರತಕ್ಕೆ ಕೊಂಚ ಹಿನ್ನಡೆಯಾಯಿತಾದರೂ, ಮಂದಾನಾ ಜೊತೆಗೂಡಿದ ಹರ್ಮನ್ ಪ್ರೀತ್ ಕೌರ್ ಉತ್ತಮ ಸಾಥ್ ನೀಡಿದರು. ಅಜೇಯ ಆಟವಾಡಿದ ಇಬ್ಬರೂ ಭಾರತಕ್ಕೆ 8 ವಿಕೆಟ್ ಗಳ ಜಯ ತಂದಿತ್ತರು. ಹರ್ಮನ್ ಪ್ರೀತ್ ಕೌರ್ ಅಜೇಯ 20 ರನ್ ಗಳಿಸಿದರೆ, ಸ್ಮೃತಿ ಮಂದಾನಾ ಅಜೇಯ 62 ರನ್ ಗಳಿಸಿದರು.
Comments