ಮಗನಿಗೆ ಸರ್ಪ್ರೈಸ್ ನೀಡಲು 15 ಗಂಟೆಗಳ ಕಾಲ ಪ್ರಯಾಣಿಸಿದ ಧವನ್

ಶ್ರೀಲಂಕಾ ಪ್ರವಾಸದಲ್ಲಿದ್ದ ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ ಕುಟುಂಬವನ್ನು ಸಿಕ್ಕಾಪಟ್ಟೆ ಮಿಸ್ ಮಾಡಿಕೊಂಡಿದ್ದರಂತೆ. ಅದನ್ನು ಧವನ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು.
ಶ್ರೀಲಂಕಾ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ ನಂತ್ರ ಮಗನನ್ನು ಭೇಟಿಯಾಗಲು ಧವನ್ ನೇರವಾಗಿ ಆತನ ಶಾಲೆಗೆ ಹೋಗಿದ್ದಾರೆ. ಈ ವಿಡಿಯೋವನ್ನು ಧವನ್ ಟ್ವಿಟ್ ಮಾಡಿದ್ದಾರೆ. ಮಗನಿಗೆ ಸರ್ಪ್ರೈಸ್ ನೀಡಲು ಮಗನ ಶಾಲೆಗೆ ಹೋದ ಧವನ್ ಮಗನ ಕಣ್ಣುಗಳನ್ನು ಮುಚ್ಚುತ್ತಾರೆ.
ಧವನ್ ಕೈ ಮೇಲೆ ಕೈ ಆಡಿಸುವ ಮಗ ನಂತ್ರ ಪಾಪಾ ಎಂದು ಗುರುತು ಹಿಡಿಯುತ್ತಾನೆ. ನಂತ್ರ ಇಬ್ಬರು ಅಪ್ಪಿ, ಮುತ್ತಿಟ್ಟುಕೊಳ್ಳುವ ವಿಡಿಯೋವನ್ನು ಧವನ್ ಟ್ವಿಟ್ ಮಾಡಿದ್ದಾರೆ. ಮಗನನ್ನು ನೋಡಿ ಧವನ್ ತುಂಬಾ ಖುಷಿಯಾಗಿದ್ದಾರೆ. ತಂದೆ ನೋಡಿ ಮಗ ಕೂಡ ತುಂಬಾ ಸಂತೋಷಗೊಂಡಿದ್ದಾನೆ. ಕುಟುಂಬಸ್ಥರನ್ನು ನೋಡಲು 15 ಗಂಟೆಗಳ ಕಾಲ ಪ್ರಯಾಣ ಬೆಳೆಸಿದ್ದೇನೆ ಎಂದು ಧವನ್ ಹೇಳಿದ್ದಾರೆ.
Comments