ಐಪಿಎಲ್ ನಲ್ಲಿ ರಾಜಸ್ತಾನ ರಾಯಲ್ಸ್ ತಂಡಕ್ಕೆ ಶಾಕ್

2018ರ ಐಪಿಎಲ್ ನಲ್ಲಿ ಅಜಿಂಕ್ಯಾ ರಹಾನೆ ರಾಜಸ್ತಾನ ರಾಯಲ್ಸ್ ತಂಡದ ನೇತೃತ್ವ ವಹಿಸಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಘಟನೆಯಲ್ಲಿ ತಮ್ಮ ಕೈವಾಡವೂ ಇರುವುದನ್ನು ಸ್ಮಿತ್ ಒಪ್ಪಿಕೊಂಡಿದ್ದರಿಂದ ಅವರಿಗೆ ಪಂದ್ಯದ ಶೇ.100ರಷ್ಟು ದಂಡ ಹಾಕಲಾಗಿತ್ತು.
ಒಂದು ಪಂದ್ಯದಿಂದ ನಿಷೇಧ ಹೇರಲಾಗಿತ್ತು. ಇದಾದ ಬಳಿಕ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ತಂಡದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಡೇವಿಡ್ ವಾರ್ನರ್ ಉಪನಾಯಕ ಹುದ್ದೆಯಿಂದ ಕೆಳಗಿಳಿದಿದ್ದರು. ಪಂದ್ಯದ ಮೂರನೇ ದಿನ ಆಸ್ಟ್ರೇಲಿಯಾದ ಕೆಮರೊನ್ ಬಾಲ್ ಟೆಂಪರಿಂಗ್ ಮಾಡಿದ್ದು ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಆದ್ರೆ ನಾಯಕ ಸ್ಮಿತ್ ಸೂಚನೆಯಂತೆ ತಾನು ಚೆಂಡು ವಿರೂಪಗೊಳಿಸಿದ್ದಾಗಿ ಕೆಮರೊನ್ ಹೇಳಿದ್ದರು. ಮೂಲಗಳ ಪ್ರಕಾರ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸ್ಟೀವ್ ಸ್ಮಿತ್ ಗೆ ಒಂದು ವರ್ಷ ಹಾಗೂ ಡೇವಿಡ್ ವಾರ್ನರ್ ಗೆ 6 ತಿಂಗಳು ಕ್ರಿಕೆಟ್ ನಿಂದ ನಿಷೇಧ ಹೇರುವ ಸಾಧ್ಯತೆ ಇದೆ.
Comments