ಹಾರ್ದಿಕ್ ಪಾಂಡ್ಯ ವಿರುದ್ಧ FRI ದಾಖಲು

22 Mar 2018 11:07 AM | Sports
554 Report

ಕಳೆದ ಡಿಸೆಂಬರ್‌ನಲ್ಲಿ ಡಾ. ಬಿ.ಆರ್‌.ಅಂಬೇಡ್ಕರ್‌ ಕುರಿತು ಹಾರ್ದಿಕ್‌‌ ಪಾಂಡ್ಯ ಅವಮಾನಕಾರಿ ಟ್ವೀಟ್‌ ಮಾಡಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಜಲೋರ್‌ ಜಿಲ್ಲೆಯ ವಕೀಲ ಹಾಗೂ ರಾಷ್ಟ್ರೀಯ ಭೀಮ್‌ ಸೇನಾ ಸಂಘಟನೆಯ ಸದಸ್ಯ ಡಿ.ಆರ್‌.ಮೇಘ್ವಾಲ್‌ ಎಂಬುವವರು ಹಾರ್ದಿಕ್‌‌ ಪಾಂಡ್ಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

ಆದರೆ, ಈ ದೂರು ಸ್ವೀಕರಿಸಲು ಪೊಲೀಸರು ನಿರಾಕರಿಸಿದ್ದರು ಎನ್ನಲಾಗಿದೆ. ಹೀಗಾಗಿ ಮೇಘ್ವಾಲ್‌ ಕ್ರಿಕೆಟಿಗ ಹಾರ್ದಿಕ್‌‌ ಪಾಂಡ್ಯ ವಿರುದ್ಧ ಜೋಧ್‌ಪುರ್‌ ಕೋರ್ಟ್‌ ಮೊರೆ ಹೋಗಿದ್ದರು. ಅಂತೆಯೇ ಈ ಅರ್ಜಿ ವಿಚಾರಣೆ ನಡೆಸಿರುವ ಕೋರ್ಟ್‌ ಹಾರ್ದಿಕ್‌‌ ಪಾಂಡ್ಯ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದೆ.

Edited By

Shruthi G

Reported By

Madhu shree

Comments